
ರಾಮನಗರ: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿ ಅಲ್ಲ. ನನಗೆ ಅದರ ಅನಿವಾರ್ಯತೆಯೂ ಇಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬಿಜೆಪಿ ಸೇರ್ಪಡೆ ವದಂತಿ,ಕಾಂಗ್ರೆಸ್ ಬಿಡಲ್ಲ: ಅಂಬಿ
ಮಂಡ್ಯ: ‘ನಾನು ಬಿಜೆಪಿ ಸೇರುತ್ತೇನೆ ಎಂಬುದು ಕೇವಲ ವದಂತಿ. ಹಲವು ಹುದ್ದೆಗಳನ್ನು ನೀಡಿ ಬೆಳೆಸಿದ ಕಾಂಗ್ರೆಸ್ ಅನ್ನು ತೊರೆಯುವ ಪ್ರಶ್ನೆಯೇ ಇಲ್ಲ' ಎಂದು ನಟ, ಶಾಸಕ ಅಂಬರೀಶ್ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬಿಜೆಪಿಯ ಕೆಲ ನಾಯಕರು ನನ್ನನ್ನು ಭೇಟಿ ಮಾಡಿರುವುದು ನಿಜ. ಆದರೆ, ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತೇನೆ ಎಂಬುದು ಕೇವಲ ವದಂತಿಯಷ್ಟೆ. ಕಾಂಗ್ರೆಸ್ ನನಗೆ ಹಲವು ಹುದ್ದೆಗಳನ್ನು ನೀಡಿ ಬೆಳೆಸಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ. ಸಚಿವ ಸ್ಥಾನ ಹೋದ ಮಾತ್ರಕ್ಕೆ ನಾನು ಪಕ್ಷ ಬಿಡುತ್ತೇನೆ ಎನ್ನುವುದು ಯಾವ ನ್ಯಾಯ' ಎಂದರು.
ಚುನಾವಣೆಯಲ್ಲಿ ಸಿದ್ದು ಹೋರಾಟಕ್ಕೆ ಜಯ: ಗೌಡ
ಹಾಸನ: ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೋರಾಟಕ್ಕೆ ಜಯ ಲಭಿಸಿದ್ದು ಈ ಫಲಿತಾಂಶವನ್ನು ನಾವು ಸ್ವಾಗತಿಸುವುದಾಗಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ಜಿಲ್ಲೆಯ ಆಲಗೌಡನಹಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯ ಫಲಿತಾಂಶ ವಿಧಾನಸಭೆ ಚುನಾವಣೆ ಮುನ್ಸೂಚನೆ ಅಲ್ಲ ಎಂದರು.
ದಲಿತರನ್ನು ಸಿಎಂ ಮಾಡಿಯೇ ಸಾಯುವೆ
ವಿಜಯಪುರ: ‘ರಾಜ್ಯದಲ್ಲಿ ದಲಿತರೊಬ್ಬರನ್ನು ಮುಖ್ಯ ಮಂತ್ರಿಯನ್ನಾಗಿ ಮಾಡಿಯೇ ನಾನು ಸಾಯುತ್ತೇನೆ. ಇದು ನನ್ನ ದೃಢ ಸಂಕಲ್ಪ' ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಭಾವೋದ್ವೇಗದಿಂದ ಹೇಳಿದ್ದಾರೆ. ಶುಕ್ರವಾರ ಅಂಬೇಡ್ಕರ್ ಅವರ 126ನೇ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ದಲಿತರು ಕೇವಲ ಕೇಂದ್ರ ಸಚಿವ, ಶಾಸಕರಾದರೆ ಸಾಲದು. ಅವರು ಮುಖ್ಯಮಂತ್ರಿಯೂ ಆಗಬೇಕಿದೆ. ನನಗೆ ಮುಖ್ಯಮಂತ್ರಿಯಾಗಬೇಕು ಎಂಬ ಕನಸು ಇಲ್ಲ. ದಲಿತರೊಬ್ಬರನ್ನು ಮುಖ್ಯಮಂತ್ರಿಯಾಗಿ ನೋಡಬೇಕು ಎಂಬುದು ನನ್ನ ಹಂಬಲ, ಮಹದಾಸೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.