ಪುಲ್ವಾಮಾ ದಾಳಿ : ಭಾರತ ಬೆಂಬಲಿಸಿದ ಉತ್ತರ ಕೊರಿಯಾ

By Web Desk  |  First Published Feb 25, 2019, 12:05 PM IST

ಜಮ್ಮು ಕಾಶ್ಮೀರದಲ್ಲಿ  ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಿಂದ ಭಾರತೀಯ ಸೇನೆಯ 44 ಯೊಧರು ಹುತಾತ್ಮರಾದ ಘಟನೆಗೆ ವಿಶ್ವದ ಅನೇಕ ದೇಶಗಳು ಖಂಡನೆ ವ್ಯಕ್ತಪಡಿಸಿದ್ದರು.  ಇದೀಗ ಸರ್ವಾಧಿಕಾರಿ ಎಂದೇ ಬಿಂಬಿತವಾಗಿರುವ ಉತ್ತರ ಕೋರಿಯಾದ ಕಿಮ್ ಜಾಂಗ್ ಉನ್ ಸರ್ಕಾರವೂ ಕೂಡ ಈ ದಾಳಿಯನ್ನು ಖಂಡಿಸಿದೆ. 


ಸಿಯೋಲ್ : ಜಮ್ಮು ಕಾಶ್ಮೀರದ ಪುಲ್ವಾಮಾ ದಾಳಿಗೆ ಉತ್ತರ ಕೊರಿಯಾ ಖಂಡನೆ ವ್ಯಕ್ತಪಡಿಸಿದೆ. 

ಅತ್ಯಂತ ಕಟ್ಟುನಿಟ್ಟಿನ ಆಡಳಿತಕ್ಕೆ ಹೆಸರಾಗಿರುವ ಸರ್ವಾಧಿಕಾರಿ ಎಂದೇ ಬಿಂಬಿಸಲಾದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಸರ್ಕಾರವೇ ಸ್ವತಃ ಈ ಭೀಕರ ದಾಳಿಯನ್ನು ಖಂಡಿಸಿದೆ. 

Latest Videos

undefined

ನಾವು 1 ಅಣುಬಾಂಬ್‌ ಹಾಕಿದ್ರೆ ಭಾರತ 20 ಹಾಕಿ ನಮ್ಮನ್ನು ಮುಗಿಸುತ್ತೆ!

ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ದಾಳಿ ನಡೆಸಿ 44 ಯೋಧರು ಹುತಾತ್ಮರಾಗಿದ್ದು, ಈ ಘಟನೆ ಅತ್ಯಂತ ದುಃಖಕರ ಎಂದು ಉತ್ತರ ಕೊರಿಯಾದ ವಿದೇಶಾಂಗ ಸಚಿವಾಲಯ ಹೇಳಿದೆ. 

ಪಾಕಿಸ್ತಾನ ಮೂಲದ ಜೈಶ್  ಇ ಮೊಹಮ್ಮದ್ ಸಂಘಟನೆ ಪುಲ್ವಾಮ ದಾಳಿಯ ಹೊಣೆ ಹೊತ್ತಿದ್ದು, ಇಂತಹ ಉಗ್ರ ದಾಳಿಯನ್ನು ನಮ್ಮ ದೇಶ ತೀವ್ರವಾಗಿ ಖಂಡಿಸುತ್ತದೆ ಎಂದಿದೆ. 

ಟೊಮ್ಯಾಟೋಗೆ ಬಾಂಬ್ ನಿಂದ ಉತ್ತರಿಸ್ತೇವೆ: ಜೋಕರ್ ಆದ ಪಾಕ್ ಪತ್ರಕರ್ತ!

ಫೆ. 14ರಂದು ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಜೈಶ್ ಇ ಮೊಹಮ್ಮದ್ ಸಂಘಟನೆ ಸೇರಿದ ಉಗ್ರನೋರ್ವ ಸ್ಫೋಟಕ ತುಂಬಿದ್ದ ಕಾರನ್ನು ಭಾರತೀಯ ಯೋಧರು ತೆರಳುತ್ತಿದ್ದ ಬಸ್ ಗೆ ಡಿಕ್ಕಿಯಾಗಿಸಿ ಈ ವೇಳೆ 44 ಯೋಧರು ಹುತಾತ್ಮರಾಗಿದ್ದರು. ಬಳಿಕ ಈ ದಾಳಿ ಬಗ್ಗೆ ವಿವಿಧ ದೇಶಗಳು ತೀವ್ರ ಖಂಡನೆ ವ್ಯಕ್ತಪಡಿಸಿದ್ದವು. 

click me!