ನಾವು 1 ಅಣುಬಾಂಬ್ ಹಾಕಿದ್ರೆ ಭಾರತ 20 ಹಾಕಿ ನಮ್ಮನ್ನು ಮುಗಿಸುತ್ತೆ!| ಪಾಕಿಸ್ತಾನದ ಮಾಜಿ ಅಧ್ಯಕ್ಷ ಮುಷರ್ರಫ್‌ರಿಂದ ಪಾಕ್‌ಗೇ ಎಚ್ಚರಿಕೆ
ಅಬುಧಾಬಿ[ಫೆ.25]: ನಾವು ಒಂದೇ ಒಂದು ಅಣುಬಾಂಬ್ ಹಾಕಿದರೂ ಭಾರತದವರು 20 ಅಣುಬಾಂಬ್ ಹಾಕಿ ನಮ್ಮನ್ನು ಮುಗಿಸಿಬಿಡಬಹುದು ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಜ| ಪರ್ವೇಜ್ ಮುಷರ್ರಫ್ ತಮ್ಮ ದೇಶಕ್ಕೇ ಎಚ್ಚರಿಕೆ ನೀಡಿದ್ದಾರೆ.
ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ದಾಳಿ ನಡೆಸಿದವರು ನಮ್ಮದೇ ದೇಶದ ಜೈಷ್- ಎ- ಮೊಹಮ್ಮದ್ ಉಗ್ರರು ಎಂದು ಕೆಲ ದಿನಗಳ ಹಿಂದೆ ಒಪ್ಪಿಕೊಂಡಿದ್ದ ಮುಷರ್ರಫ್, ಆ ದಾಳಿಯ ಹಿನ್ನೆಲೆಯಲ್ಲಿ ಶುಕ್ರವಾರ ಯುಎಇಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಭಾರತದ ಸಾಮರ್ಥ್ಯವನ್ನು ಹೊಗಳಿದ ಬಗ್ಗೆ ಪಾಕಿಸ್ತಾನದ ‘ಡಾನ್’ ಪತ್ರಿಕೆ ವರದಿ ಮಾಡಿದೆ.
‘ಭಾರತ ಹಾಗೂ ಪಾಕಿಸ್ತಾನದ ಸಂಬಂಧ ಅಪಾಯಕಾರಿ ಮಟ್ಟಕ್ಕೆ ತಲುಪಿದೆ. ಆದರೆ, ಅಣ್ವಸ್ತ್ರಗಳ ದಾಳಿ ನಡೆಯುವುದಿಲ್ಲ. ನಾವು ಭಾರತದ ಮೇಲೆ ಒಂದು ಅಣುಬಾಂಬ್ ಹಾಕಿದರೆ ಅವರು ಏಕಕಾಲಕ್ಕೆ 20 ಅಣುಬಾಂಬ್ ಹಾಕಿ ನಮ್ಮನ್ನು ಮುಗಿಸಿಬಿಡಬಹುದು. ಇದಕ್ಕೆ ಏಕೈಕ ಪರಿಹಾರವೆಂದರೆ ನಾವೇ ಮೊದಲು ಅವರ ಮೇಲೆ 50 ಅಣುಬಾಂಬ್ ಹಾಕಬೇಕು. ಆಗ ಅವರು 20 ಅಣುಬಾಂಬ್‌ನಿಂದ ನಮ್ಮ ಮೇಲೆ ದಾಳಿ ನಡೆಸಲು ಸಾಧ್ಯವಿಲ್ಲ. ಆದರೆ, ನಾವು ಮೊದಲಿಗೆ 50 ಬಾಂಬ್ ಹಾಕಲು ಸಿದ್ಧರಿದ್ದೇವೆಯೇ’ ಎಂದು ಮುಷರ್ರಫ್ ಪ್ರಶ್ನಿಸಿದರು.