'ನನ್ನ ಬಗ್ಗೆ ಅಸಮಾಧಾನಗೊಂಡು ಇದುವರೆಗೂ ಯಾರೂ ಪಕ್ಷ ಬಿಟ್ಟಿಲ್ಲ'

Published : May 10, 2017, 04:56 PM ISTUpdated : Apr 11, 2018, 12:49 PM IST
'ನನ್ನ ಬಗ್ಗೆ ಅಸಮಾಧಾನಗೊಂಡು ಇದುವರೆಗೂ ಯಾರೂ ಪಕ್ಷ ಬಿಟ್ಟಿಲ್ಲ'

ಸಾರಾಂಶ

ನನ್ನ ಬಗ್ಗೆ ಅಸಮಾಧಾನಗೊಂಡು ಇದುವರೆಗೂ ಯಾರೂ ಪಕ್ಷ ಬಿಟ್ಟಿಲ್ಲ. ಮುಂದೆಯೂ ಯಾರೂ ಪಕ್ಷ ಬಿಡುವುದಿಲ್ಲ. ಯಾವ ಶಾಸಕರೂ ಕಾಂಗ್ರೆಸ್ ಪಕ್ಷ ಬಿಡುತ್ತಿಲ್ಲ. ಈ ಬಗೆಗೆ ಇರುವ ಮಾಹಿತಿಯೆಲ್ಲ ಸುಳ್ಳು. ಹೀಗಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು (ಮೇ.10): ನನ್ನ ಬಗ್ಗೆ ಅಸಮಾಧಾನಗೊಂಡು ಇದುವರೆಗೂ ಯಾರೂ ಪಕ್ಷ ಬಿಟ್ಟಿಲ್ಲ. ಮುಂದೆಯೂ ಯಾರೂ ಪಕ್ಷ ಬಿಡುವುದಿಲ್ಲ. ಯಾವ ಶಾಸಕರೂ ಕಾಂಗ್ರೆಸ್ ಪಕ್ಷ ಬಿಡುತ್ತಿಲ್ಲ. ಈ ಬಗೆಗೆ ಇರುವ ಮಾಹಿತಿಯೆಲ್ಲ ಸುಳ್ಳು.
ಹೀಗಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಸಮನ್ವಯ ಸಮಿತಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ನಾಯಕರು ಪಕ್ಷ ಬಿಟ್ಟ ನಂತರ ನನ್ನ ಮೇಲೆ ಆರೋಪ ಮಾಡುತ್ತಾರೆ. ಆದರೆ, ಅವರು ಬಿಡಲು ಅವರದ್ದೇ ಆದ ಬೇರೆ ಕಾರಣಗಳಿದ್ದವು. ಉದಾಹರಣೆಗೆ ನಾನು ಸಚಿವ ಸಂಪುಟದಿಂದ 12 ಮಂದಿಯನ್ನು ಕೈಬಿಟ್ಟಿದ್ದೆ. ಆದರೆ, ಶ್ರೀನಿವಾಸ ಪ್ರಸಾದ್ ಅವರು ಮಾತ್ರ ಪಕ್ಷ ತ್ಯಜಿಸಿದರು. ಪಕ್ಷ ಬಿಟ್ಟ ನಂತರ ನನ್ನ ಮೇಲೆ ಆರೋಪ ಮಾಡಿದರು. ಇನ್ನು ಎಸ್.ಎಂ.ಕೃಷ್ಣ ಪಕ್ಷ ಬಿಡಲು ಅವರದ್ದೇ ಆದ ಕಾರಣಗಳಿದ್ದವು ಎಂದು ಹೇಳಿದರು.
ವಿಶ್ವನಾಥ್ ರೋಮಾಂಚನದ ಬಗ್ಗೆ ಅವರನ್ನೇ ಕೇಳಿ:
ಇನ್ನು ತಮ್ಮ ಬಗ್ಗೆ ವಿಶ್ವನಾಥ್ ಮಾಡಿದ್ದಾರೆ ಎಂಬ ಆರೋಪಗಳ ಬಗ್ಗೆ ಮಾತನಾಡಿದ ಅವರು, ನನ್ನ ಪ್ರಕಾರ ವಿಶ್ವನಾಥ್ ಪಕ್ಷ ಬಿಡುವುದಿಲ್ಲ ಎಂದರು. ನಿಮ್ಮನ್ನು ಸಿಎಂ ಮಾಡಿದಾಗ ರೋಮಾಂಚನವಾಯ್ತು. ಆದರೆ, ಈಗ ಆ ಥ್ರಿಲ್ ಉಳಿದಿಲ್ಲ ಎಂದು ವಿಶ್ವನಾಥ್ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ವಿಶ್ವನಾಥ್‌ಗೆ ಯಾವಾಗ ರೋಮಾಂಚನವಾಯ್ತು ಎಂಬ ಬಗ್ಗೆ ನೀವು ಅವರನ್ನೇ ಕೇಳಬೇಕು ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹುಬ್ಬಳ್ಳಿ ಮರ್ಯಾದಾ ಹತ್ಯೆ ಮಾಸುವ ಮುನ್ನವೇ, ಚಿತ್ರದುರ್ಗದಲ್ಲಿ ಮತ್ತೊಬ್ಬ ಗರ್ಭಿಣಿ ಜಾತಿ ದ್ವೇಷಕ್ಕೆ ಬಲಿ!
ವಿಶ್ವದ ಅಪರೂಪದ ರತ್ನ ಧರಿಸಿ ಸೊಸೆಯ ಅಮ್ಮನ ಬರ್ತಡೆಯಲ್ಲಿ ಮಿಂಚಿದ ನೀತಾ ಅಂಬಾನಿ