ಈ ಸಾರಿ ಚಳಿಗಾಲ ಹೀಗಿರುತ್ತದೆ, ಹವಾಮಾನ ಇಲಾಖೆ ವರದಿ

Published : Oct 13, 2018, 03:05 PM IST
ಈ ಸಾರಿ ಚಳಿಗಾಲ ಹೀಗಿರುತ್ತದೆ, ಹವಾಮಾನ ಇಲಾಖೆ ವರದಿ

ಸಾರಾಂಶ

ಈ ಬಾರಿ ಚಳಿಗಾಲ ಹೇಗಿರುತ್ತದೆ? ಬಿಸಿಯಾಗಿರುತ್ತದೆ..! ಅರೆ ಇದೇನಿದು ಚಳಿಗಾಲ ಬಿಸಿಯಾಗಿರುತ್ತದೆಯಾ ಎಂದು ಭಾವಿಸಬೇಡಿ. ಹವಾಮಾನ ಇಲಾಖೆ ನೀಡಿರುವ ಮುಂದಿನ ಚಳಿಗಾಲದ ವಾತಾವರಣವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ನವದೆಹಲಿ(ಅ.13) ಕೇಂದ್ರ ಹವಾಮಾನ ಇಲಾಖೆ ಹೇಳುವಂತೆ ಮುಂದಿನ ಚಳಿಗಾಲ ವಾಡಿಕೆಗೆ ಹೋಲಿಸಿದರೆ ಬಿಸಿಯಾಗಿರಲಿದೆ. ಅಕ್ಟೋಬರ್-ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಉಷ್ಣಾಂಶ ವಾಡಿಕೆಗಿಂತ ಕೊಂಚ ಜಾಸ್ತಿಯಾಗಿರಲಿದೆ.

ಡಿಸೆಂಬರ್ ನಿಂದ ಜನವರಿವರೆಗೆ ಬಿಸಿ ಮತ್ತಷ್ಟು ಜಾಸ್ತಿ ಇರಲಿದೆ. ಹವಾಮಾನ ಇಲಾಖೆಯ ಡಿ.ಎಸ್.ಪೈ ಹೇಳುವಂತೆ ದಕ್ಷಿಣ ಏಷ್ಯಾ ಭಾಗದಲ್ಲಿ ಈ ಬಾರಿ ಚಳಿಗಾಲದ ಪ್ರಭಾವ ಕಡಿಮೆ ಇರಲಿದ್ದು ದೇಶದ ನೈಋತ್ಯ ಭಾಗದಲ್ಲಿಯೂ ಇದೇ ವಾತಾವರಣ ಇರಲಿದೆ ಎಂದಿದ್ದಾರೆ.

ಬಿಸಿ ಎಲ್ ನಿನೋ ಫೆಸಿಫಿಕ್ ಸಾಗರದಲ್ಲಿದ್ದು ಅಕ್ಟೋಬರ್ ನಿಂದ ಡಿಸೆಂಬರ್ ವರೆಗಿನ ಉಷ್ಣಾಂಶದ ಮೇಲೆ ಪರಿಣಾಮ ಬೀರಲಿದೆ. ಇನ್ನೊಂದು ಕಡೆ ದೆಹಲಿಯ ಗಾಳಿ ಮತ್ತಷ್ಟು ಹದಗೆಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೆನಡಾದಲ್ಲಿ ತರಬೇತಿ ವಿಮಾನ ಅಪಘಾತ: ಭಾರತದ ಇಬ್ಬರು ಸಾವು, ತಮಿಳುನಾಡು, ಪುದುಚೇರಿ ಮೂಲದ ವಿದ್ಯಾರ್ಥಿಗಳು!
"Life is Short...": ತಾಯಿಯ ಅಗಲಿಕೆಯ ನೋವಿನಲ್ಲಿ 80 ವರ್ಷದ ತಂದೆಯ ಕನಸು ನನಸು ಮಾಡಿದ ಮಗ!