ನಮ್ಮಂಥವರಿಗೆ ಇಂದಿಗೂ ದೇಗುಲ ಪ್ರವೇಶಕ್ಕೆ ಅವಕಾಶವಿಲ್ಲ

By Web DeskFirst Published Sep 29, 2018, 10:19 AM IST
Highlights

ದೇಶದಲ್ಲಿ ಅಸ್ಪೃಶ್ಯತೆ ಮತ್ತು ಅಸಮಾನತೆ ಇನ್ನೂ ಜೀವಂತವಾಗಿದ್ದು ಇಂದಿಗೂ ಅದೆಷ್ಟೋ ದೇವಾಲಯಗಳಿಗೆ ನಮ್ಮಂಥವರಿಗೆ ಅವಕಾಶವಿಲ್ಲ. ಮಹಿಳೆಯ ಸೇರಿ ಸರ್ವ ಜನಾಂಗಕ್ಕೂ ದೇಗುಲಗಳ ಪ್ರವೇಶಕ್ಕೆ ಅವಕಾಶ ಕೊಡಬೇಕು ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ. 

ಕಲಬುರಗಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರು ಹೋಗಬಹುದು ಎಂದು ಸುಪ್ರಿಂಕೋರ್ಟ್‌ ನೀಡಿರುವ ತೀರ್ಪು ಅತ್ಯಂತ ಸ್ವಾಗತಾರ್ಹವಾಗಿದೆ. ಈ ತೀರ್ಪು ಮಹಿಳೆಯರಿಗಷ್ಟೇ ಅಲ್ಲ ಎಲ್ಲಾ ವರ್ಗದವರಿಗೂ ಖುಷಿ ತಂದಿದೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. 

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಅಸ್ಪೃಶ್ಯತೆ ಮತ್ತು ಅಸಮಾನತೆ ಇನ್ನೂ ಜೀವಂತವಾಗಿದ್ದು ಇಂದಿಗೂ ಅದೆಷ್ಟೋ ದೇವಾಲಯಗಳಿಗೆ ನಮ್ಮಂಥವರಿಗೆ ಅವಕಾಶವಿಲ್ಲ. ಮಹಿಳೆಯ ಸೇರಿ ಸರ್ವ ಜನಾಂಗಕ್ಕೂ ದೇಗುಲಗಳ ಪ್ರವೇಶಕ್ಕೆ ಅವಕಾಶ ಕೊಡಬೇಕು ಎಂದರು.

ಇದೇವೇಳೆ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಅಸ್ಪೃಶ್ಯತೆಯನ್ನು ಜೀವಂತವಾಗಿಡಲು ಹವಣಿಸುತ್ತಿದ್ದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಇಂತಹ ಸಿದ್ಧಾಂತಗಳು ದೇಶಕ್ಕೆ ಮಾರಕವಾಗಿದೆ ಎಂದರು.

click me!