ಭಾರತದಲ್ಲಿ ಅಸಹನೆಗೆ ಅವಕಾಶವಿಲ್ಲ: ರಾಷ್ಟ್ರಪತಿ ಪ್ರಣಬ್

By Suvarna Web DeskFirst Published Mar 2, 2017, 5:00 PM IST
Highlights

ದೇಶದಲ್ಲಿ ಅಸಹಿಷ್ಣು ಭಾರತೀಯನಿಗೆ ಯಾವುದೇ ಅವಕಾಶ ಸಿಗಬಾರದು. ಭಾರತವು ಅನಾದಿ ಕಾಲದಿಂದಲೂ ಸಹಿಷ್ಣುತೆ, ಮುಕ್ತ ವಿಚಾರ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಾಕ್ಷಿಯಾಗಿದೆ. ಟೀಕೆ ಹಾಗೂ ಭಿನ್ನಾಭಿಪ್ರಾಯಗಳಿಗೆ ಅವಕಾಶವಿರಬೇಕು, ಎಂದು ಪ್ರಣಬ್ ಮುಖರ್ಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೊಚ್ಚಿ (ಮಾ. 02): ಸಮಾಜದಲ್ಲಿ ಅಸಹನೆಗೆ ಉತ್ತೇಜನ ನೀಡುವವರಿಗೆ ಇಂದು ಕಠಿಣ ಸಂದೇಶ ನೀಡಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂಥವರಿಗೆ ದೇಶದಲ್ಲಿ ಅವಕಾಶವಿಲ್ಲವೆಂದಿದ್ದಾರೆ.

ಕೆ.ಎಸ್. ರಾಜಮೋನಿ ಸ್ಮರಣಾರ್ಥ ಹಮ್ಮಿಕೊಳ್ಳಲಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಷ್ಟ್ರಪತಿ, ಟೀಕೆ ಹಾಗೂ ಭಿನ್ನಾಭಿಪ್ರಾಯಗಳ ಬೆಂಬಲಕ್ಕೆ ನಿಂತಿದ್ದಾರೆ.

ದೇಶದಲ್ಲಿ ಅಸಹಿಷ್ಣು ಭಾರತೀಯನಿಗೆ ಯಾವುದೇ ಅವಕಾಶ ಸಿಗಬಾರದು. ಭಾರತವು ಅನಾದಿ ಕಾಲದಿಂದಲೂ ಸಹಿಷ್ಣುತೆ, ಮುಕ್ತ ವಿಚಾರ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಾಕ್ಷಿಯಾಗಿದೆ. ಟೀಕೆ ಹಾಗೂ ಭಿನ್ನಾಭಿಪ್ರಾಯಗಳಿಗೆ ಅವಕಾಶವಿರಬೇಕು, ಎಂದು ಪ್ರಣಬ್ ಮುಖರ್ಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳು ಹಿಂಸಾಚಾರದಲ್ಲಿ ತೊಡಗಿರುವುದು ಖೇದನೀಯ ವಿಚಾರ. ರಾಷ್ಟ್ರೀಯ ಹಿತಾಸಕ್ತಿ ಹಾಗೂ ದೇಶಪ್ರೇಮ ಭಾವನೆಯನ್ನು ಪುನರವಲೋಕಿಸಲು ಇದು ಸಕಾಲವೆಂದು ರಾಷ್ಟ್ರಪತಿ ಹೇಳಿದ್ದಾರೆ.

ಮಹಿಳೆ ಹಾಗೂ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ಪ್ರಣಬ್ ಮುಖರ್ಜಿ ಅವರು ಈ  ಸಂದರ್ಭದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.  

click me!