ಎಂಸಿಡಿ ಚುನಾವಣೆಯಲ್ಲಿ ವಿವಿಪ್ಯಾಟ್ ಅಳವಡಿಸಿರುವ ಇವಿಎಂ ಬಳಸಲು ಕೋರ್ಟ್ ನಕಾರ

By Suvarna Web DeskFirst Published Apr 18, 2017, 11:39 AM IST
Highlights

ಮುಂಬರಲಿರುವ ಮುನಿಸಿಪಲ್ ಕಾರ್ಪೋರೇಶನ್ ಆಫ್ ದಿಲ್ಲಿ (ಎಂಸಿಡಿ) ಚುನಾವಣೆಯಲ್ಲಿ ವಿವಿಪ್ಯಾಟ್ ಅಳವಡಿಸಿರುವ ಇವಿಎಂ ಅನ್ನು ಬಳಸುವಂತೆ ಆಪ್ ಕೋರಿದ್ದ ಅರ್ಜಿಗೆ ತುರ್ತು ರಿಲೀಫ್ ನೀಡಲು ದೆಹಲಿ ನ್ಯಾಯಾಲಯ ನಿರಾಕರಿಸಿದೆ.

ನವದೆಹಲಿ (ಏ.18): ಮುಂಬರಲಿರುವ ಮುನಿಸಿಪಲ್ ಕಾರ್ಪೋರೇಶನ್ ಆಫ್ ದಿಲ್ಲಿ (ಎಂಸಿಡಿ) ಚುನಾವಣೆಯಲ್ಲಿ ವಿವಿಪ್ಯಾಟ್ ಅಳವಡಿಸಿರುವ ಇವಿಎಂ ಅನ್ನು ಬಳಸುವಂತೆ ಆಪ್ ಕೋರಿದ್ದ ಅರ್ಜಿಗೆ ತುರ್ತು ರಿಲೀಫ್ ನೀಡಲು ದೆಹಲಿ ನ್ಯಾಯಾಲಯ ನಿರಾಕರಿಸಿದೆ.

ಈ ಸಂಬಂಧ 2 ದಿನಗಳೊಳಗೆ ಪ್ರತಿಕ್ರಿಯೆ ನೀಡುವಂತೆ ಭಾರತೀಯ ಚುನಾವಣಾ ಆಯೋಗ ಹಾಗೂ ದೆಹಲಿ ರಾಜ್ಯ ಚುನಾವಣಾ ಆಯೋಗಕ್ಕೆ ಕೋರ್ಟ್ ನೊಟೀಸ್ ನೀಡಿದೆ. ಎಂಸಿಡಿ ಚುನಾವಣೆ ನಡೆಸಲು ವಿವಿಪ್ಯಾಟ್ ಅಳವಡಿಸಿರುವ ಇವಿಎಂ ಬಳಸುವಂತೆ ಕೇಳಲು ಕಾರಣಗಳೇನು ಎಂದು ನ್ಯಾಯಾಲಯ ಆಪನ್ನು ಪ್ರಶ್ನಿಸಿದೆ.

ಮಹಮ್ಮದ್ ತಹೀರ್ ಹುಸೇನ್ ಎನ್ನುವವರು ಅರ್ಜಿ ಸಲ್ಲಿಸಿದ್ದರು. ಇವಿಎಂಗಳಲ್ಲಿ ಮೋಸವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ವಿವಿಪ್ಯಾಟ್ ಅಳವಡಿಸಿರುವ ಇವಿಎಂ ಬಳಸಿ ಎಂದು ಒತ್ತಾಯಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿನ್ನೆ ಚುನಾವಣಾ ಆಯೋಗವನ್ನು ಭೇಟಿ ಮಾಡಿದ್ದರು.

click me!