ಭಯೋತ್ಪಾದನೆಗೆ ಆಶ್ರಯ ನೀಡುವ ದೇಶದ ವಿರುದ್ಧ ಕಠಿಣ ಕ್ರಮ; ಪಾಕ್ ಗೆ ಮೋದಿ ಖಡಕ್ ಉತ್ತರ

By Suvarna Web DeskFirst Published May 1, 2017, 12:22 PM IST
Highlights

ಭಯೋತ್ಪಾದನೆಯನ್ನೂ ಯಾವ ದೇಶವೂ ಸಹಿಸಲು ಸಾಧ್ಯವಿಲ್ಲ, ಅದನ್ನು ಬೇರು ಸಮೇತ ಕಿತ್ತು ಹಾಕುವಂತೆ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ದೇಶಗಳಿಗೂ ಒತ್ತಾಯಿಸಿದ್ದಾರೆ.

ನವದೆಹಲಿ (ಮೇ.01): ಭಯೋತ್ಪಾದನೆಯನ್ನೂ ಯಾವ ದೇಶವೂ ಸಹಿಸಲು ಸಾಧ್ಯವಿಲ್ಲ, ಅದನ್ನು ಬೇರು ಸಮೇತ ಕಿತ್ತು ಹಾಕುವಂತೆ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ದೇಶಗಳಿಗೂ ಒತ್ತಾಯಿಸಿದ್ದಾರೆ.

ಭಯೋತ್ಪಾದನೆಯು ದೊಡ್ಡ ತಲೆನೋವಾಗಿದೆ.  ಯಾವ ದೇಶವೂ ಇದನ್ನು ಸಹಿಸಲಾಗದು. ಬೇರು ಸಮೇತ ಕಿತ್ತು ಹಾಕಬೇಕು. ಭಯೋತ್ಪಾದನೆಗೆ ಆಶ್ರಯ ನೀಡುವ ದೇಶಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಟರ್ಕಿ ಅಧ್ಯಕ್ಷ ತಾಯ್ಯಿಪ್ ಇರ್ಡೋಗಾನ್ ಜಂಟಿ ಹೇಳಿಕೆಯಲ್ಲಿ ಹೇಳಿದ್ದಾರೆ.

 ಭಾರತ ಹಾಗೂ ಟರ್ಕಿ ಒಟ್ಟಾಗಿ ಭಯೋತ್ಪಾದನೆ ವಿರುದ್ಧ ಹೋರಾಡಲಿದೆ.  ಸಹಕಾರವನ್ನು ಇನ್ನಷ್ಟು ಬಲಗೊಳಿಸಲಿದೆ ಎಂದರು. ಮೋದಿಯವರ ಈ ಮಾತಿಗೆ ಟರ್ಕಿ ಅಧ್ಯಕ್ಷ ಎರ್ಡೋಗಾನ್ ತಮ್ಮ ಬೆಂಬಲ ಸೂಚಿಸಿದ್ದಾರೆ. ಭಾರತದ ಪರ ಟರ್ಕಿ ಯಾವಾಗಲೂ ನಿಲ್ಲುತ್ತದೆ ಎಂದಿದ್ದಾರೆ.

ಟರ್ಕಿ ಅಧ್ಯಕ್ಷರಾಗಿ ಎರ್ಡೋಗಾನ್ ರವರಿಗೆ ಇದು ಭಾರತಕ್ಕೆ ಮೊದಲ ಭೇಟಿಯಾಗಿದ್ದು ಅಲ್ಲಿನ ಪ್ರಧಾನ ಮಂತ್ರಿಯಾಗಿದ್ದಾಗ 2008 ರಲ್ಲಿ ಭೇಟಿ ನೀಡಿದ್ದರು.

click me!