
ಬೆಂಗಳೂರು[ಜು. 07] ಎಂಟು ದಿನಗಳ ಅಮೆರಿಕ ಪ್ರವಾಸ ಮುಗಿಸಿ ಸಿಎಂ ಕುಮಾರಸ್ವಾಮಿ ಎಚ್ ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಹಾಗಾದರೆ ದೋಸ್ತಿ ಸರಕಾರ ಉಳಿಸಿಕೊಳ್ಳಲು ಸಿಎಂ ಯಾವೆಲ್ಲ ಕ್ರಮಕ್ಕೆ ಮುಂದಾಗಬಹುದು.
1. ಅತೃಪ್ತರಿಗೆ ಮಂತ್ರಿಗಿರಿ: ದೋಸ್ತಿ ಪಕ್ಷ ಕಾಂಗ್ರೆಸ್ ನೊಂದಿಗೆ ಸಭೆ ನಡೆಸಿ ಅತೃಪ್ತರಿಗೆ ಮಂತ್ರಿಗಿರಿ ನೀಡಿ ಬಂಡಾಯ ಶಮನ ಮಾಡಿ ಸರಕಾರ ಉಳಿಸಿಕೊಳ್ಳುವ ತೀರ್ಮಾನ ಮಾಡಬಹುದು.
‘ರಾಜೀನಾಮೆ ಪರ್ವ ಸಿದ್ದರಾಮಯ್ಯ ಗೇಮ್ ಪ್ಲ್ಯಾನ್’
2. ಸರಕಾರ ವಿಸರ್ಜನೆ: ಸರಕಾರ ವಿಸರ್ಜನೆ ಮಾಡಲು ರಾಜ್ಯಪಾಲರಿಗೆ ಮನವಿ ಮಾಡಿಕೊಳ್ಳಬಹುದು.
3. ಚುನಾವಣೆಗೆ ಹೋಗೋಣ: ಕಾಂಗ್ರೆಸ್ ಸಖ್ಯ ಕಡಿದುಕೊಂಡು ನೇರವಾಗಿ ಜನರ ಬಳಿಗೆ ಹೋಗೋಣ ಎಂದು ತಂದೆ ದೇವೇಗೌಡರ ಮಾತಿನಂತೆ ನಡೆದುಕೊಳ್ಳಬಹುದು.
4. ಉಳಿದ ಶಾಸಕರ ಮೇಲೆ ಹಿಡಿತ: ಪಕ್ಷದಲ್ಲಿ ಉಳಿದುಕೊಂಡಿರುವ ಶಾಸಕರು ಯಾವುದೇ ಕಾರಣಕ್ಕೂ ರಾಜೀನಾಮೆ ಕಡೆ ತೆರಳದಂತೆ ನೋಡಿಕೊಳ್ಳಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.