ರೈಲ್ವೆ ಪ್ರಯಾಣಿಕರಿಗೆ ಇಲಾಖೆಯಿಂದ ಗುಡ್ ನ್ಯೂಸ್

Published : Dec 27, 2017, 07:24 PM ISTUpdated : Apr 11, 2018, 12:42 PM IST
ರೈಲ್ವೆ ಪ್ರಯಾಣಿಕರಿಗೆ ಇಲಾಖೆಯಿಂದ ಗುಡ್ ನ್ಯೂಸ್

ಸಾರಾಂಶ

ಮುಂದಿನ ಅವಧಿಯಲ್ಲಿ  ಪ್ಯಾಸೆಂಜರ್, ವಿಶೇಷ ರೈಲುಗಳ ಸೇರಿದಂತೆ ಯಾವುದೇ ಪ್ರಯಾಣ ದರವನ್ನು ಏರಿಸುವ ಯಾವುದೇ ಪ್ರಸ್ತಾಪವಿಲ್ಲ.

ನವದೆಹಲಿ(ಡಿ.27): ರೈಲಿನಲ್ಲಿ ಪ್ರಯಾಣಿಸುವವರಿಗೆ ಭಾರತೀಯ ರೈಲ್ವೆ ಗುಡ್ ನ್ಯೂಸ್ ನೀಡಿದೆ. ಮುಂದಿನ ವರ್ಷ ಆಯವ್ಯಯದಲ್ಲಿ ರೈಲ್ವೆ ಪ್ರಯಾಣ ದರಗಳನ್ನು ಏರಿಸುವ ಯಾವುದೇ ಪ್ರಸ್ತಾವನೆ ಇಲ್ಲವೆಂದು ಸಂಸತ್ತಿಗೆ ತಿಳಿಸಿದೆ.

ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದ ರಾಜ್ಯ ರೈಲ್ವೆ ಖಾತೆ ಸಚಿವ ರಾಜನ್ ಗೊಹೇನ್, ಕಳೆದ ವರ್ಷದ ಅವಧಿಯಲ್ಲಿ ದೆಹಲಿ -ಮುಂಬೈ ನಡುವಿನ ಪ್ರಯಾಣ ದರವನ್ನು ಶೇ0.68ರಿಂದ 0.99 ಏರಿಸಲಾಗಿದೆ.

ಮುಂದಿನ ಅವಧಿಯಲ್ಲಿ  ಪ್ಯಾಸೆಂಜರ್, ವಿಶೇಷ ರೈಲುಗಳ ಸೇರಿದಂತೆ ಯಾವುದೇ ಪ್ರಯಾಣ ದರವನ್ನು ಏರಿಸುವ ಯಾವುದೇ ಪ್ರಸ್ತಾಪವಿಲ್ಲ. ಬೇಡಿಕೆಯ ಆಧಾರದ ಮೇಲೆ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ, ವಿಶೇಷ ದರಗಳ ಅನ್ವಯದಲ್ಲಿ ವಿಶೇಷ ರೈಲುಗಳನ್ನು ಪರಿಚಯಿಸಲಾಗಿದೆ.ಈ ರೈಲುಗಳು ದ್ವಿತೀಯ ದರ್ಜೆ ಬೋಗಿಗಳಿಗೆ ಶೇ.10 ದರ,  ಕಾಯ್ದಿರಿಸಿದ ಹಾಗೂ ಎಸಿ ಬೋಗಿಗಳಿಗೆ ಶೇ.30 ದರ ವಿಧಿಸಲಾಗಿದೆ' ಎಂದು ಸಚಿವರು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಾಟಾದ ತಾಜ್‌, ಐಟಿಸಿಗೆ ಅದಾನಿ ಗ್ರೂಪ್ ಟಕ್ಕರ್, ಐಷಾರಾಮಿ ಹೋಟೆಲ್‌ ಉದ್ಯಮಕ್ಕೆ ಎಂಟ್ರಿ, ಏರ್ಪೋರ್ಟ್‌ಗಳೇ ಟಾರ್ಗೆಟ್!
ಬೆಂಗಳೂರು ಕಾಲೇಜಿನಲ್ಲಿ ಹಾಜರಾತಿ ಹಗರಣ; ಅಲಯನ್ಸ್ ವಿವಿ ದೂರು, 6 ಜನರ ವಿರುದ್ಧ ಎಫ್‌ಐಆರ್!