ಯಾವ ಪ್ರಧಾನಿಯೂ 5 ವರ್ಷ ಅಧಿಕಾರ ಪೂರೈಸದ ಪಾಕ್ ಪೊಲಿಟಿಕ್ಸ್!

Published : Jul 28, 2018, 01:42 PM ISTUpdated : Jul 30, 2018, 12:16 PM IST
ಯಾವ ಪ್ರಧಾನಿಯೂ 5 ವರ್ಷ ಅಧಿಕಾರ ಪೂರೈಸದ ಪಾಕ್ ಪೊಲಿಟಿಕ್ಸ್!

ಸಾರಾಂಶ

1947ರಲ್ಲಿ ಸ್ವಾತಂತ್ರ್ಯ ದೊರೆತು ಭಾರತ-ಪಾಕಿಸ್ತಾನ ವಿಭಜನೆಯಾದ ನಂತರ ಪಾಕಿಸ್ತಾನದಲ್ಲಿನಡೆದ 11ನೇ ಸಾರ್ವತ್ರಿಕ ಚುನಾವಣೆ ಮುಕ್ತಾಯವಾಗಿದೆ. ವಿಚಿತ್ರ ಎಂದರೆ ಇದುವರೆಗೂ ಯಾವೊಬ್ಬ ಪ್ರಧಾನಿಯೂ 5 ವರ್ಷ ಅಧಿಕಾರಾವಧಿ ಪೂರೈಸಿಲ್ಲ. 1947ರಿಂದ ಸರ್ವಾಧಿಕಾರಿ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾಕಿಸ್ತಾನವನ್ನು ಆಳಿದ ಅವ್ಯವಸ್ಥಿತ ಚರಿತ್ರೆ ಇಲ್ಲಿದೆ.

1947ರಿಂದ ಈಚೆಗೆ, ಪಾಕ್ ತನ್ನ ಅವ್ಯವಸ್ಥೆ, ಅಸ್ಥಿರತೆ, ಭ್ರಷ್ಟಾಚಾರ ಹಗರಣ, ದಂಗೆಯ ಕಾರಣದಿಂದಾಗಿ ಪಾಕ್ ನಾಯಕರು ಗಡಿಪಾರಾಗಿದ್ದಾರೆ, ಹತ್ಯೆಗೊಳಗಾಗಿದ್ದಾರೆ. ದಂಗೆ ಭ್ರಷ್ಟಾಚಾರ, ಗಡಿಪಾರು, ಬಿಕ್ಕಟ್ಟುಗಳೆ ಪಾಕಿಸ್ತಾನವನ್ನು ಅಸ್ಥಿರತೆಗೆ ದೂಡಿದೆ. ಇದನ್ನು ‘4ಸಿ’(ಕಾಪ್,ಕರಪ್ಶನ್,ಕಂಟ್ರಿ-ಹೋಪಿಂಗ್,ಕ್ರೈಸೀಸ್) ಎಂದೇ ಕರೆಯಲಾಗುತ್ತಿದೆ.

ದಂಗೆ: ಇಷ್ಕಂದರ್ ಮಿರ್ಜಾ, ಝುಲ್ಫಿಕರ್ ಆಲಿ ಭುಟ್ಟೋ(1977) ಮತ್ತು ನವಾಜ್ ಷರೀಫ್(1999)ರಲ್ಲಿ ದಂಗೆಯಿಂದಾಗಿಯೇ ಅಧಿಕಾರದಿಂದ ಕೆಳಗಿಳಿದಿದ್ದರು. ಆದರೆ ಲಿಯಾಖತ್ ಆಲಿ ಖಾನ್ ಮತ್ತು ಜಿಯಾ-ಉಲ್-ಹಕ್(1980), ಬೆನಜೀರ್ ಭುಟ್ಟೋ(1995) ಅವರ ವಿರುದ್ಧ ನಡೆಸಿದ್ದ ದಂಗೆ ಯಶಸ್ವಿಯಾಗಿರಲಿಲ್ಲ.

ಭ್ರಷ್ಟಾಚಾರ: ಆಸಿಫ್ ಆಲಿ ಜರ್ದಾರಿ, ನವಾಜ್ ಷರೀಫ್ ತಮ್ಮ ಅಧಿಕಾರವಧಿಯಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸಿದ್ದರು. 

ಗಡೀಪಾರು: 2004-2007ರ ಅವಧಿಯಲ್ಲಿ ಆಸಿಫ್ ಆಲಿ ಜರ್ದಾರಿ ಸ್ವತಃ ದೇಶ ಬಿಟ್ಟು ದುಬೈ, ಲಂಡನ್ ಮತ್ತು ನ್ಯೂಯಾರ್ಕ್‌ನಲ್ಲಿ ನೆಲೆಸಿದ್ದರು. 2000-2007ರ ಅವಧಿಯಲ್ಲಿ ನವಾಜ್ ಷರೀಫ್ಅವರನ್ನು ಗಡಿಪಾರು ಮಾಡಲಾಗಿತ್ತು. ಬೆನಜೀರ್ ಭುಟ್ಟೋ ಸ್ವತಃ ಗಡಿಪಾರು ವಿಧಿಸಿಕೊಂಡು 1984-87ರಲ್ಲಿ ಲಂಡನ್‌ಗೆ, 1994-2007ರ ವೇಳೆಯಲ್ಲಿ ದುಬೈಗೆ ತೆರಳಿದ್ದರು. ಮುಷ್ರಫ್ ಕೂಡ 2008-2003ರವರೆಗೆ ಲಂಡನ್‌ಗೆ ಹಾರಿದ್ದರು.

ಬಿಕ್ಕಟ್ಟು: ಕಳೆದ 2 ದಶಕದಲ್ಲಿ ಷರೀಫ್ (1999), ಮುಷ್ರಫ್(2000, 2003 ಮತ್ತು 2007) ಮತ್ತು ಗಿಲಾನಿ (2008)ರಲ್ಲಿ ಇವರ ಹತ್ಯೆಗೆ ವಿಫಲ ಯತ್ನ ನಡೆದಿತ್ತು. ಆದರೆ ಬೆನಜೀರ್ ಭುಟ್ಟೋ ಅವರನ್ನು 2007ರಲ್ಲಿ ಹತ್ಯೆ ಮಾಡಲಾಗಿತ್ತು.

ಪಾಕ್‌ನಲ್ಲಿ ಮತದಾನಕ್ಕೆ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಬಳಕೆ ಭಾರತದಲ್ಲಿ ಹೆಬ್ಬೆಟ್ಟನ್ನು ಡಿಜಿಟಲ್ ಕಾರ್ಯಗಳಿಗೆ ಬಳಸುತ್ತಿರುವ ಈ ಸಮಯದಲ್ಲಿ ಪಾಕ್‌ನಲ್ಲಿ ಮತ ಹಾಕಲು ಹೆಬ್ಬೆಟ್ಟು ಒತ್ತುವ ಪದ್ಧತಿ ಇದೆ. ಇಲ್ಲಿ ವಿದ್ಯುನ್ಮಾನ ಮತಯಂತ್ರದ ಬದಲಿಗೆ ಬ್ಯಾಲೆಟ್ ಪೇಪರ್ ಅನ್ನು ಬಳಸಲಾಗುತ್ತಿದೆ. ಮತ ಹಾಕುವ ಮುನ್ನ ಸಹಿ ಹಾಕುವ ಬದಲಿಗೆ ಅಲ್ಲಿ ಹೆಬ್ಬೆಟ್ಟು ಒತ್ತಲಾಗುತ್ತದೆ. 

171 ಮಹಿಳೆಯರು ಸ್ಪರ್ಧೆ
ಪಾಕಿಸ್ತಾನದ 2018ರ ಸಾರ್ವತ್ರಿಕ ಚುನಾವಣೆಯ ಮತ್ತೊಂದು ವಿಶೇಷತೆ ಎಂದರೆ ಈ ಬಾರಿ 171 ಮಹಿಳೆಯರು ಚುನಾವಣೆಗೆ ಸ್ಪರ್ಧಿಸಿದ್ದರು. ಇಷ್ಟೊಂದು ಪ್ರಮಾಣದಲ್ಲಿ ಮಹಿಳೆಯರು ಚುನಾವಣೆಗೆ ಸ್ಪರ್ಧಿಸಿದ್ದು ಇದೇ ಮೊದಲು.

ಭ್ರಷ್ಟಾಚಾರ ಆರೋಪದಲ್ಲಿ ಪಾಕ್ ಪ್ರಧಾನಿಗೇ ಗಲ್ಲು!
ಪಾಕಿಸ್ತಾನದ 9ನೇ ಪ್ರಧಾನಿಯಾಗಿ 1973-77ರವರೆಗೆ ಪಾಕಿಸ್ತಾನವನ್ನು ಆಳಿದ್ದ ಜುಲ್ಫಿಕರ್ ಆಲಿ ಭುಟ್ಟೋ 1977ರ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ಎಸಗಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿದವು. ಈ ವೇಳೆ ದೇಶಾದ್ಯಂತ ಹಿಂಸಾಚಾರ ಭುಗಿಲೆದ್ದಿತ್ತು. 1977-79ರ ವರೆಗೆ ಭುಟ್ಟೋವರನ್ನು ತಮ್ಮ ರಾಜಕೀಯ ವೈರಿಯ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಬಂಧನದಲ್ಲಿಡಲಾಗಿತ್ತು. ಇದೇ ಆರೋಪದ ಮೇಲೆ 1979ರಲ್ಲಿ ಸುಪ್ರೀಂ ಕೋರ್ಟ್ ಮರಣದಂಡನೆ ವಿಧಿಸಿತು. ಏಪ್ರಿಲ್ 4, 1979ರಲ್ಲಿ ಭುಟ್ಟೋ ಅವರನ್ನು ಗಲ್ಲಿಗೇರಿಸಲಾಯಿತು.

"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಟ್ರಂಪ್‌ ತೆರಿಗೆ ಶಾಕ್‌ಗೆ ಚೀನಾ ದಾಖಲೆಯ ತಿರುಗೇಟು
ಮೋದಿ ರೀತಿ ರೈತರಿಗೆ ಟ್ರಂಪ್‌ ಹಣ ವರ್ಗಾವಣೆ