ಇಣುಕುತ್ತಿದ್ದಾರೆ ಸೂಪರ್ ಸಿಎಂಗಳು: ಆಡಳಿತದ್ದು ಇದೆನಾ ಗೋಳು?

Published : Jul 03, 2018, 12:43 PM IST
ಇಣುಕುತ್ತಿದ್ದಾರೆ ಸೂಪರ್ ಸಿಎಂಗಳು: ಆಡಳಿತದ್ದು ಇದೆನಾ ಗೋಳು?

ಸಾರಾಂಶ

ಸರ್ಕಾರದಲ್ಲಿ ಸೂಪರ್ ಸಿಎಂ ಗಳದ್ದೇ ದರ್ಬಾರ್? ಸರ್ಕಾರದ ಕೆಲಸಗಳಲ್ಲೂ ಕುಟುಂಬಸ್ಥರ ಹಸ್ತಕ್ಷೇಪ ರೇವಣ್ಣ ಆಯ್ತು, ಈಗ ಬಾಲಕೃಷ್ಣೇ ಗೌಡರ ಸರದಿ ಜೆಡಿಎಸ್ ನ ಸಚಿವರಿಗಿಲ್ಲ ಪಿಎ ನೇಮಕ ಸ್ವಾತಂತ್ರ್ಯ. ಪದ್ಮನಾಭನಗರದಿಂದಲೇ ಬರಬೇಕು ಗ್ರೀನ್ ಸಿಗ್ನಲ್ ನೇಮಕಾತಿಗೆ ಬಾಲಕೃಷ್ಣೇಗೌಡರ ಒಪ್ಪಿಗೆ ಬೇಕು ಹಾಸನ ,ಮಂಡ್ಯ ದ ಅಧಿಕಾರಿಗಳಿಗೆ ಮಣೆ?

ಬೆಂಗಳೂರು(ಜು.3): ಸಮ್ಮಿಶ್ರ ಸರ್ಕಾರ ರಚನೆಯಾದಾಗಿನಿಂದ ಆಡಳಿತದಲ್ಲಿ ಹಸ್ತಕ್ಷೇಪವೂ ಜಾಸ್ತಿಯಾಗುತ್ತಿದೆ ಎಂಬುದು ಮೊದಲಿನಿಂದಲೂ ಕೇಳಿ ಬಂದ ಆರೋಪ. ಅದಕ್ಕೆ ವಿವಿಧ ಇಲಾಖೆಗಳಲ್ಲಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸಹೋದರ, ಸಚಿವ ಎಚ್.ಡಿ.ರೇವಣ್ಣ ಮೂಗು ತೂರಿಸುತ್ತಾರೆ ಎಂಬ ಆರೋಪ ಕೇಳಿ ಬಂದಿದ್ದೇ ಸಾಕ್ಷಿ.

ರೇವಣ್ಣ ಅವರ ವಿಚಾರ ಮುಗಿಯುತ್ತಿದ್ದಂತೇ ಇದೀಗ ಸಿಎಂ ಅವರ ಮತ್ತೋರ್ವ ಸಹೋದರ ಬಾಲಕೃಷ್ಣೇಗೌಡರ ಹಸ್ತಕ್ಷೇಪದ ಗುಸುಗುಸು ಶುರುವಾಗಿದೆ. ಜೆಡಿಎಸ್ ಸಚಿವರ ಆಪ್ತ ಸಹಾಯಕರ ನೇಮಕ ಇತ್ಯಾದಿ ಆಡಳಿತ ಸಂಬಂಧಿ ವಿಚಾರದಲ್ಲಿ ಬಾಲಕೃಷ್ಣೇಗೌಡ ಹಸ್ತಕ್ಷೇಪ ಮಾಡುತ್ತಿದ್ದಾರೆ ಎನ್ನಲಾಗಿದೆ.

ಜೆಡಿಎಸ್ ಸಚಿವರುಗಳಿಗೆ ತಮಗೆ ಬೇಕಾದ ಪಿ.ಎ, ಪಿಎಸ್ ಗಳನ್ನು ನೇಮಕ ಮಾಡಿಕೊಳ್ಳುವ ಸ್ವಾತಂತ್ರ್ಯ ಇಲ್ಲವಾಗಿದೆ ಎನ್ನಲಾಗುತ್ತಿದೆ. ಯಾವ ಸಚಿವರಿಗೆ ಯಾರು ಆಪ್ತ ಸಹಾಯಕರಾಗಬೇಕು ಎಂಬುದನ್ನು ಬಾಲಕೃಷ್ಣೇಗೌಡರು ನಿರ್ಧರಿಸುತ್ತಾರೆ ಎಂಬ ಸಣ್ಣ ಅಸಮಾಧಾನದ ಧ್ವನಿ ಕೇಳಿಸುತ್ತಿದೆ.

ಇದಕ್ಕೆ ಉದಾಹರಣೆ ಎಂಬಂತೆ ವಿಜಯಪುರದ ಸಚಿವರಿಗೆ ಮಂಡ್ಯದ ಅಧಿಕಾರಿವೋರ್ವರನ್ನು ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಿಸಿದ್ದು, ಬಂಡೆಪ್ಪ ಕಾಶಪ್ಪನವರ್ ಅವರಗೆ ಇನ್ನೂ ಆಪ್ತ ಕಾರ್ಯದರ್ಶಿ ನೇಮಕವಾಗದೇ ಇರುವುದು, ಅಲ್ಲದೇ ಈ ಹುದ್ದೆಗಳಲ್ಲಿ ಹಾಸನ ಮತ್ತು ಮಂಡ್ಯ ಮೂಲದ ಅಧಿಕಾರಿಗಳೇ ಕಾಣುತ್ತಿರುವುದು ಈ ಅನುಮಾನ ಮೂಡಲು ಕಾರಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಒಂದು-ಎರಡು ಬಣಗಳೆರಡು..' ಹಾಡಿನ ಮೂಲಕ ಸರ್ಕಾರದ ಕಾಲೆಳೆದ ಅಭಯ್ ಪಾಟೀಲ್
ಎರಡು ತಿಂಗಳು ಇಂಟರ್ನ್‌ಶಿಪ್ ಮಾಡುವವರಿಗೆ 4 ಲಕ್ಷ ಸ್ಟೈಫಂಡ್ ಕೊಡುತ್ತದೆ ಈ ಕಾಲೇಜು