ಯಾರೊಂದಿಗೂ ಮೈತ್ರಿ ಇಲ್ಲ - ಏಕಾಂಗಿಯಾಗಿ ಕಾಂಗ್ರೆಸ್ ಸ್ಪರ್ಧೆ : ಸಿಎಂ

Published : Feb 10, 2018, 08:56 AM ISTUpdated : Apr 11, 2018, 12:50 PM IST
ಯಾರೊಂದಿಗೂ ಮೈತ್ರಿ ಇಲ್ಲ - ಏಕಾಂಗಿಯಾಗಿ ಕಾಂಗ್ರೆಸ್ ಸ್ಪರ್ಧೆ : ಸಿಎಂ

ಸಾರಾಂಶ

ಪಕ್ಷದ ನಾಯಕಿ ಸೋನಿಯಾ ಗಾಂಧಿ ಹೇಳಿರುವ ಸಮಾನ ಮನಸ್ಕ ಪಕ್ಷಗಳ ಜತೆಗಿನ ಮೈತ್ರಿ ಮಾತು​ಕತೆ ರಾಷ್ಟ್ರ ಮಟ್ಟದ್ದಾಗಿದ್ದು, ರಾಜ್ಯ​ದಲ್ಲಿ ಕಾಂಗ್ರೆಸ್‌ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಸಿಎಂ ಸಿದ್ದ​ರಾ​ಮಯ್ಯ ಸ್ಪಷ್ಟ​ಪ​ಡಿ​ಸಿ​ದರು.

ದಾವ​ಣ​ಗೆರೆ: ಪಕ್ಷದ ನಾಯಕಿ ಸೋನಿಯಾ ಗಾಂಧಿ ಹೇಳಿರುವ ಸಮಾನ ಮನಸ್ಕ ಪಕ್ಷಗಳ ಜತೆಗಿನ ಮೈತ್ರಿ ಮಾತು​ಕತೆ ರಾಷ್ಟ್ರ ಮಟ್ಟದ್ದಾಗಿದ್ದು, ರಾಜ್ಯ​ದಲ್ಲಿ ಕಾಂಗ್ರೆಸ್‌ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಸಿಎಂ ಸಿದ್ದ​ರಾ​ಮಯ್ಯ ಸ್ಪಷ್ಟ​ಪ​ಡಿ​ಸಿ​ದರು.

ಹರಿ​ಹರದಲ್ಲಿ ಶುಕ್ರ​ವಾರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿ, ಜೆಡಿ​ಎ​ಸ್‌-ಬಿಎ​ಸ್ಪಿ​ ಮೈತ್ರಿ ಆಯಾ ಪಕ್ಷ​ಗ​ಳಿಗೆ ಬಿಟ್ಟವಿಚಾರ. ಆ ಪಕ್ಷ​ಗಳ ಮೈತ್ರಿ ಬಗ್ಗೆ ನಾನು ಪ್ರತಿ​ಕ್ರಿ​ಯಿ​ಸು​ವು​ದಿಲ್ಲ ಎಂದರು.

ಇದೇ ವೇಳೆ, ರಾಜ್ಯದ ಎಲ್ಲಾ 224 ಕ್ಷೇತ್ರ​ದಲ್ಲೂ ಕಾಂಗ್ರೆಸ್‌ ಅಭ್ಯ​ರ್ಥಿ​ಗಳು ಸ್ಪರ್ಧಿ​ಸ​ಲಿದ್ದು, ಮತ್ತೆ ನಮ್ಮ ಸರ್ಕಾ​ರವೇ ಅಸ್ತಿ​ತ್ವಕ್ಕೆ ಬರಲಿದೆ ಎಂಬ ವಿಶ್ವಾ​ಸ​ ವ್ಯಕ್ತ​ಪ​ಡಿ​ಸಿದರು.

ಚುನಾ​ವಣೆ ಹಿನ್ನೆ​ಲೆ​ಯಲ್ಲಿ ಪ್ರಧಾನಿ ಮೋದಿ ಕೇವಲ ಕರ್ನಾ​ಟ​ಕ​ವ​ನ್ನಷ್ಟೇ ಟಾರ್ಗೆಟ್‌ ಮಾಡಿ​ಕೊಂಡಿ​ದ್ದಾರೆ. ಆದರೆ, ನಾವು ಇಡೀ ದೇಶ​ವನ್ನೇ ಟಾರ್ಗೆಟ್‌ ಮಾಡಿ​ಕೊಂಡಿ​ದ್ದೇವೆ. ಸಮೀ​ಕ್ಷೆ​ಯಲ್ಲೂ ಕಾಂಗ್ರೆಸ್‌ ಪಕ್ಷವೇ ಮತ್ತೆ ರಾಜ್ಯ​ದಲ್ಲಿ ಅಧಿಕಾ​ರಕ್ಕೆ ಬರು​ತ್ತ​ದೆಂಬು​ದನ್ನು ಸಾರಿ ಹೇಳಿವೆ ಎಂದು ತಿಳಿ​ಸಿ​ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೆದ್ದಲು ತಿನ್ನಲ್ಲ, ನೀರಿಗೆ ಹಾಳಾಗಲ್ಲ: ಬಾತ್‌ರೂಮ್‌ಗೆ ಬೆಸ್ಟ್ ಅಲ್ಯೂಮಿನಿಯಂ ಡೋರ್‌ಗಳು: ಇಲ್ಲಿವೆ ಸೂಪರ್ ಡಿಸೈನ್
ಬುರ್ಖಾ ಧರಿಸಿ ಲೇಡೀಸ್ ಕೋಚ್‌ನಲ್ಲಿ ಯುವಕನ ಪಯಣ: ಮಹಿಳೆಯರು ವಿರೋಧಿಸುತ್ತಿದ್ದಂತೆ ಚಲಿಸುವ ರೈಲಿನಿಂದಲೇ ಕೆಳಗೆ ಹಾರಿದ