ಚೀನಾ – ಭಾರತದ ನಡುವೆ ಸಂಭವಿಸಲಿದೆಯಾ ಮತ್ತೊಂದು ಬಿಕ್ಕಟ್ಟು

By Suvarna Web DeskFirst Published Feb 10, 2018, 8:30 AM IST
Highlights

ಮಾಲ್ಡೀವ್ಸ್ ರಾಜಕೀಯ ಬಿಕ್ಕಟ್ಟು ಪರಿಹಾರಕ್ಕಾಗಿ ಭಾರತದೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಚರ್ಚೆ ನಡೆಸುತ್ತಿದ್ದೇವೆ. ಮಾಲ್ಡೀವ್ಸ್ ವಿಷಯವೂ ಉಭಯ ರಾಷ್ಟ್ರಗಳ ನಡುವೆ ಮತ್ತೊಂದು ವಿವಾದವಾಗ ಕೂಡದು ಎಂದು ಬಯಸಿರುವುದಾಗಿ ಚೀನಾ ತಿಳಿಸಿದೆ.

ಬೀಜಿಂಗ್‌: ಮಾಲ್ಡೀವ್ಸ್ ರಾಜಕೀಯ ಬಿಕ್ಕಟ್ಟು ಪರಿಹಾರಕ್ಕಾಗಿ ಭಾರತದೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಚರ್ಚೆ ನಡೆಸುತ್ತಿದ್ದೇವೆ. ಮಾಲ್ಡೀವ್ಸ್ ವಿಷಯವೂ ಉಭಯ ರಾಷ್ಟ್ರಗಳ ನಡುವೆ ಮತ್ತೊಂದು ವಿವಾದವಾಗ ಕೂಡದು ಎಂದು ಬಯಸಿರುವುದಾಗಿ ಚೀನಾ ತಿಳಿಸಿದೆ.

ಆದರೂ, ಮಾಲ್ಡೀವ್ಸ್ ನಲ್ಲಿ ಕಾರ್ಯಾಚರಣೆಗೆ ಭಾರತದ ವಿಶೇಷ ಪಡೆಗಳು ಸನ್ನದ್ಧ ಸ್ಥಿತಿಯಲ್ಲಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ, ಬಾಹ್ಯ ಶಕ್ತಿಗಳು ಈ ವಿಷಯದಲ್ಲಿ ಮಧ್ಯಪ್ರವೇಶಿಸಕೂಡದು ಎಂದು ಚೀನಾ ಪ್ರತಿಪಾದಿಸಿದೆ.

ಡೋಕ್ಲಾಂನಲ್ಲಿ ಸೇನಾ ಬಿಕ್ಕಟ್ಟು, ಉಗ್ರ ಮಸೂದ್‌ ಅಜರ್‌ನನ್ನು ಜಾಗತಿಕ ಭಯೋತ್ಪಾದಕನಾಗಿ ಘೋಷಿಸುವುದು ಮುಂತಾದ ವಿಷಯಗಳಲ್ಲಿ ಭಾರತ, ಚೀನಾ ನಡುವೆ ಪ್ರಮುಖ ವಿವಾದಗಳಿವೆ. ಮಾಲ್ಡೀವ್ಸ್ ಪ್ರಸ್ತುತ ಸನ್ನಿವೇಶದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜೊತೆ ಟೆಲಿಫೋನ್‌ ಸಂಭಾಷಣೆ ನಡೆದ ಬಗ್ಗೆ ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಗೆಂಗ್‌ ಶುವಾಂಗ್‌, ಅಂತಾರಾಷ್ಟ್ರೀಯ ಸಮುದಾಯಗಳು ಮಾಲ್ಡೀವ್ಸ್ ಪರಮಾಧಿಕಾರವನ್ನು ಗೌರವಿಸಬೇಕು ಎಂದಿದ್ದಾರೆ.

click me!