ರೂ.5000 ಹಾಗೂ ರೂ.10000 ನೋಟನ್ನು ಚಲಾವಣೆಗೆ ತರುವ ಯೋಜನೆಯಿಲ್ಲ: ಕೇಂದ್ರ ಸಚಿವ

By Suvarna Web DeskFirst Published Mar 24, 2017, 12:41 PM IST
Highlights

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮೇಘವಾಲ್, ರೂ.5000 ಹಾಗೂ ರೂ.10000 ಚಲಾವಣೆಗೆ ತರುವ ಕುರಿತು ರಿಸರ್ವ್ ಬ್ಯಾಂಕಿನೊಂದಿಗೆ ಚರ್ಚಿಸಲಾಗಿತ್ತು, ಆದರೆ ಸೂಕ್ತವಾದ ಕ್ರಮವಲ್ಲವೆಂಬ ಅಭಿಪ್ರಾಯ ವ್ಯಕ್ತವಾಗಿದೆ, ಎಂದಿದ್ದಾರೆ.

ನವದೆಹಲಿ (ಮಾ. 24): ರೂ.5000 ಹಾಗೂ ರೂ.10000 ನೋಟು ಚಲಾವಣೆಗೆ ತರುವ ಯಾವುದೇ ಯೋಜನೆ ಸರ್ಕಾರದ ಮುಂದಿಲ್ಲವೆಂದು ಹಣಕಾಸು ಇಲಾಖೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಹೇಳಿದ್ದಾರೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮೇಘವಾಲ್, ರೂ.5000 ಹಾಗೂ ರೂ.10000 ಚಲಾವಣೆಗೆ ತರುವ ಕುರಿತು ರಿಸರ್ವ್ ಬ್ಯಾಂಕಿನೊಂದಿಗೆ ಚರ್ಚಿಸಲಾಗಿತ್ತು, ಆದರೆ ಸೂಕ್ತವಾದ ಕ್ರಮವಲ್ಲವೆಂಬ ಅಭಿಪ್ರಾಯ ವ್ಯಕ್ತವಾಗಿದೆ, ಎಂದಿದ್ದಾರೆ.

ನೋಟುಗಳ ಮುದ್ರಣ ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ರೂ.5000 ಹಾಗೂ ರೂ.10000 ನೋಟುಗಳನ್ನು ಪರಿಚಯಿಸುವ ಉದ್ದೇಶವಿದೆಯೇ ಎಂದು ಕೇಳಲಾಗಿತ್ತು.

ಕಳೆದ ನವೆಂಬರ್'ನಲ್ಲಿ ರೂ.500 ಹಾಗೂ ರೂ.1000 ನೋಟುಗಳನ್ನು ಅಮಾನ್ಯ ಮಾಡಿದ್ದ ಸರ್ಕಾರ ರೂ.2000 ನೋಟನ್ನು ಪರಿಚಯಿಸತ್ತು ಹಾಗೂ ಹೊಸ ಮಾದರಿಯ ರೂ.500 ನೋಟುಗಳನ್ನು ಚಲಾವಣೆಗೆ ತಂದಿದೆ.

click me!