ಬ್ರಿಟನ್ ನ್ಯಾಯಾಲಯದಲ್ಲಿ ಮಲ್ಯ ಗಡಿಪಾರು ಮನವಿ

By Suvarna Web DeskFirst Published Mar 24, 2017, 12:08 PM IST
Highlights

ಮಲ್ಯ ಗಡಿಪಾರು ವಿಚಾರವಾಗಿ ಭಾರತ ಮಾಡಿರುವ ಮನವಿಯನ್ನು ವೆಸ್ಟ್'ಮಿನಿಸ್ಟರ್ ಜಿಲ್ಲಾ ನ್ಯಾಯಾಲಯಕ್ಕೆ ರವಾನಿಸಲಾಗಿದೆ. ಜಿಲ್ಲಾ ನ್ಯಾಯಾಧೀಶರು ಈ ಕುರಿತು ವಾರೆಂಟ್ ಹೊರಡಿಸುವ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಗೋಪಾಲ್ ಬಾಗ್ಲೇ ಹೇಳಿದ್ದಾರೆ.

ನವದೆಹಲಿ (ಮಾ.24): ಬ್ಯಾಂಕುಗಳಿಗೆ ಸಾವಿರಾರು ಕೋಟಿ ಸಾಲ ಮರು ಪಾವತಿಸದೇ ಲಂಡನ್’ನಲ್ಲಿ ನೆಲಸಿರುವ ಉದ್ಯಮಿ ವಿಜಯ್ ಮಲ್ಯ ಗಡಿಪಾರು ವಿಚಾರದಲ್ಲಿ ಭಾರತವು ಮಾಡಿರುವ ಮನವಿಗೆ ಸಮ್ಮತಿಸಿದೆಯೆಂದು ವರದಿಯಾಗಿದೆ.

ಮಲ್ಯ ಗಡಿಪಾರು ವಿಚಾರವಾಗಿ ಭಾರತ ಮಾಡಿರುವ ಮನವಿಯನ್ನು ವೆಸ್ಟ್'ಮಿನಿಸ್ಟರ್ ಜಿಲ್ಲಾ ನ್ಯಾಯಾಲಯಕ್ಕೆ ರವಾನಿಸಲಾಗಿದೆ. ಜಿಲ್ಲಾ ನ್ಯಾಯಾಧೀಶರು ಈಕುರಿತು ವಾರೆಂಟ್ ಹೊರಡಿಸುವ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಗೋಪಾಲ್ ಬಾಗ್ಲೇ ಹೇಳಿದ್ದಾರೆ.

ವಿಜಯ್ ಮಲ್ಯ ಗಡಿಪಾರಿಗೆ ಸಂಬಂಧಿಸಿದ ಕೋರ್ಟ್ ಮನವಿಯನ್ನು ವಿದೇಶಾಂಗ ವ್ಯವಹಾರ ಇಲಾಖೆಯು ಇತ್ತೀಚೆಗೆ ಬ್ರಿಟನ್ ಸರ್ಕಾರಕ್ಕೆ ಸಲ್ಲಿಸಿತ್ತು.

ಭಾರತ- ಬ್ರಿಟನ್ ಪರಸ್ಪರ ಕಾನೂನು ನೆರವು ಒಪ್ಪಂದ (MLAT)ಯ ಆಧಾರದಲ್ಲಿ ಮಲ್ಯರನ್ನು ಭಾರತಕ್ಕೆ ವಾಪಾಸು ಕರೆ ತರಲು ಜಾರಿ ನಿರ್ದೇಶನಾಲಯವು (ಇ.ಡಿ) ಮಾಡಿರುವ ಮನವಿಗೆ ಮುಂಬೈ ವಿಶೇಷ ನ್ಯಾಯಾಲಯವು ಸಮ್ಮತಿಸಿದ್ದು, ಆ ವಿವರಗಳನ್ನು ಗೃಹ ಇಲಾಖೆಯು ವಿದೇಶಾಂಗ ಇಲಾಖೆಗೆ ಒದಗಿಸಿತ್ತು.

click me!