ಕಲಾಪಕ್ಕೆ ಕ್ಯಾಮರಾ, ಮೊಬೈಲ್ ಒಯ್ಯಂಗಿಲ್ಲ..ಮಾಧ್ಯಮಗಳು ಮಾತೇ ಎತ್ತಂಗಿಲ್ಲ!

By Web Desk  |  First Published Oct 9, 2019, 10:43 PM IST

ವಿಧಾನಸಭೆ ಕಾರ್ಯ ಕಲಾಪ ವರದಿಗೆ ಮಾಧ್ಯಮಗಳಿಗೆ ಭಾಗಶಃ ನಿರ್ಬಂಧ/ ಕ್ಯಾಮರಾದಲ್ಲಿ ಶೂಟ್ ಮಾಡುವಂತೆ ಇಲ್ಲ/ ಪೋಟೋ ತೆಗೆಯುವಂತೆ ಇಲ್ಲ/ ವಾರ್ತಾ ಇಲಾಖೆ ನೀಡಿದ ಇನ್ ಪುಟ್ ಗಳೇ ಅಂತಿಮ/ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶ


ಬೆಂಗಳೂರು[ಅ. 10]  ವಿಧಾನಸಭಾ ಕಲಾಪವನ್ನು ಚಿತ್ರೀಕರಿಸುವ ಸಂಬಂಧ ಖಾಸಗಿ ಮಾಧ್ಯಮಗಳಿಗೆ ರಾಜ್ಯ ಸರ್ಕಾರ ಭಾಗಶಃ ನಿರ್ಬಂಧ ಹಾಕಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಆದೇಶದನ್ವಯ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರು ಇಂದು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿಯೂ ಮಾತುಕತೆ ಆರಂಭವಾಗಿದೆ.

ಅ. 10 ಗುರುವಾರ ಆರಂಭವಾಗಲಿರುವ ಕಲಾಪವನ್ನು ದೂರದರ್ಶನ ಚಿತ್ರೀಕರಣ ಮಾಡುತ್ತದೆ.  ಖಾಸಗಿ ಮಾಧ್ಯಮಗಳು ದೂರದರ್ಶನ ನೀಡುವ ವಿಡಿಯೋ ಬಳಸಿಕೊಂಡು ವರದಿ ಮಾಡಬೇಕು. ಖಾಸಗಿ  ವಾಹಿನಿಯ ಕ್ಯಾಮೆರಾಮೆನ್ ಮತ್ತು ಫೋಟೋಗ್ರಾಫರ್​ಗಳಿಗೆ ಪ್ರವೇಶ ಇಲ್ಲ. ಮುದ್ರಣ ಮಾಧ್ಯಮಗಳು ವಾರ್ತಾ ಇಲಾಖೆಯಿಂದ ಪೋಟೋ ಪಡೆದುಕೊಳ್ಳಬಹುದು.

Tap to resize

Latest Videos

ರೇಸ್ ನಲ್ಲಿ ಎಲ್ಲರನ್ನು ಸಿದ್ದರಾಮಯ್ಯ ಹಿಂದೆ ಹಾಕಿದ್ದು ಹೇಗೆ?

ಸಿಎಂ ಬಿಎಸ್ ಯಡಿಯೂರಪ್ಪ ಸಹ ಮಾಧ್ಯಮಗಳ ನಿರ್ಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಆದರೆ ಸ್ಪೀಕರ್ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ವಿಧಾನಸಭೆ ಕಲಾಪಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡುವ ಪ್ರಸ್ತಾವನೆ ಇಟ್ಟು ಟೀಕೆಗೆ ಗುರಿಯಾಗಿತ್ತು. ಇದಾದ ಮೇಲೆ ಕುಮಾರಸ್ವಾಮಿ ಸಿಎಂ ಆದಾಗ ಮಾಧ್ಯಮಗಳ ಪ್ರತಿನಿಧಿಗಳಿಗೆ ವಿಧಾನಸೌಧ  ಪ್ರವೇಶಕ್ಕೆ ನಿರ್ಬಂಧ ಹೇರುವ ಮಾತು ಕೇಳಿಬಂದಿತ್ತು.

 

ಮಾಧ್ಯಮಗಳು ಅವಕಾಶ ದುರ್ಬಳಕೆ ಮಾಡಿದರೆ ಕ್ರಮ ಕೈಗೊಳ್ಳಿ, ನಿಯಮಗಳನ್ನು ಬಿಗಿಗೊಳಿಸಿ.
ಅದನ್ನು ಬಿಟ್ಟು ಟಿವಿ ಚಾನೆಲ್‌ಗಳ ಕ್ಯಾಮರಾಮ್ಯಾನ್ ಮತ್ತು ಪತ್ರಿಕಾ ಛಾಯಾಗ್ರಾಹಕರ ವಿಧಾನಸಭೆ ಪ್ರವೇಶವನ್ನೇ ನಿರ್ಬಂಧಿಸಿರುವ ಸ್ಪೀಕರ್ ತೀರ್ಮಾನದಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗಿದೆ.

ಪಾರದರ್ಶಕತೆ ಬಗ್ಗೆ ಭೀತಿ ಯಾಕೆ?

— Siddaramaiah (@siddaramaiah)
click me!