ಪಾಕಿಸ್ತಾನದಂತಹ ಮೂರ್ಖರ ಸ್ವರ್ಗದಲ್ಲಿ ಇರಬೇಡಿ: ಪಾಕ್‌ ಸಚಿವನ ಪಾಠ

By Web Desk  |  First Published Aug 14, 2019, 11:40 AM IST

ಮೂರ್ಖರ ಸ್ವರ್ಗದಲ್ಲಿ ಇರಬೇಡಿ: ಪಾಕಿಗಳಿಗೆ ಪಾಕ್‌ ಸಚಿವನ ಪಾಠ| ಕಾಶ್ಮೀರ ವಿಷಯದಲ್ಲಿ ಪಾಕ್‌ಗೆ ವಿಶ್ವ ಬೆಂಬಲ ಸುಲಭವಲ್ಲ| ಹೂವಿನ ಹಾರ ಹಿಡಿದು ಯಾರೂ ಸ್ವಾಗತಕ್ಕೆ ಕಾದು ಕುಳಿತಿಲ್ಲ| ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಸಚಿವ ಖುರೇಷಿ ಭಾಷಣ


ಇಸ್ಲಾಮಾಬಾದ್‌[ಆ.14]: ಜಮ್ಮು ಮತ್ತು ಕಾಶ್ಮೀರ ಸಂಬಂಧ ಭಾರತ ಸರ್ಕಾರ ಕೈಗೊಂಡ ಕ್ರಮಗಳ ವಿರುದ್ಧ ಜಾಗತಿಕ ಬೆಂಬಲ ಪಡೆಯಲು ಪಾಕಿಸ್ತಾನ ಸರ್ಕಾರ ಯತ್ನ ಮಾಡುತ್ತಿರುವ ಹೊತ್ತಿನಲ್ಲೇ, ತಮ್ಮ ಸರ್ಕಾರ ನಡೆಸುತ್ತಿರುವ ಯತ್ನದ ಬಗ್ಗೆ ಸ್ವತಃ ಪಾಕ್‌ ವಿದೇಶಾಂಗ ಸಚಿವ ಶಾ ಮಹಮ್ಮದ್‌ ಖುರೇಷಿ ಅವರೇ ವ್ಯಂಗ್ಯವಾಡಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಪಾಕ್‌ಗೆ ಮತ್ತೆ ಕಾಶ್ಮೀರ ಮುಖಭಂಗ!

Tap to resize

Latest Videos

undefined

ಭಾರತದ ಇಂಥ ನಿರ್ಧಾರವನ್ನು ಮುಸ್ಲಿಂ ಜಗತ್ತು ಖಂಡಿಸುತ್ತದೆ ಮತ್ತು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಪಾಕಿಸ್ತಾನವನ್ನು ಬೆಂಬಲಿಸಲಿವೆ ಎಂದುಕೊ0ಂಡು ಮೂರ್ಖರ ಸ್ವರ್ಗದಲ್ಲಿ ವಾಸಿಸಬೇಡಿ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್‌ ಖುರೇಷಿ ಪಾಕಿಸ್ತಾನದ ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಪಾಕ್‌ ಆಕ್ರಮಿತ ಕಾಶ್ಮೀರದ ಮುಜಫ್ಫರಾಬಾದ್‌ನಲ್ಲಿ ಸೋಮವಾರ ಮಾತನಾಡಿದ ಖುರೇಷಿ, ‘ನೀವು ಮೂರ್ಖರ ಸ್ವರ್ಗದಲ್ಲಿ ವಾಸಿಸಬಾರದು. ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ಯಾರೂ ಹೂವಿನ ಹಾರವನ್ನು ಕೈಯಲ್ಲಿ ಹಿಡಿದು ನಿಮ್ಮನ್ನು ಸ್ವಾಗತಿಸಲು ಕಾಯುತ್ತಿಲ್ಲ. ಇನ್ನು ಇಸ್ಲಾಮಿಕ್‌ ಸಮುದಾಯದ ಪೋಷಕರು ಎಂದು ಹೇಳಿಕೊಂಡ ದೇಶಗಳು ಕೂಡಾ ಕಾಶ್ಮೀರ ವಿಷಯವಾಗಿ ಪಾಕಿಸ್ತಾನವನ್ನು ಬೆಂಬಲಿಸಲು ಬಯಸುವುದಿಲ್ಲ.

ಹೆಲಿಕಾಪ್ಟರ್ ಬೇಡ, ಓಡಾಡುವ ಸ್ವಾತಂತ್ರ್ಯ ಕೊಟ್ರೆ ಸಾಕು: ಕಾಶ್ಮೀರ ಗವರ್ನರ್‌ಗೆ ರಾಹುಲ್ ತಿರುಗೇಟು!

ಭಾರತ 100 ಕೋಟಿಗೂ ಹೆಚ್ಚು ಜನರ ಮಾರುಕಟ್ಟೆ. ಹೀಗಾಗಿ ಅನೇಕ ಮಂದಿ ಭಾರತದಲ್ಲಿ ಹೂಡಿಕೆ ಮಾಡಿದ್ದಾರೆ. ಇಸ್ಲಾಂ ಸಮುದಾಯದ ಮುಖಂಡರೂ ಭಾರತದಲ್ಲಿ ಹೂಡಿಕೆ ಮಾಡಿದ್ದಾರೆ. ಅವರಿಗೆ ಅವರದೇ ಆದ ಹಿತಾಸಕ್ತಿಗಳಿರುತ್ತವೆ. ಹೀಗಾಗಿ ಕಾಶ್ಮೀರ ವಿಷಯದಲ್ಲಿ ಜಾಗತಿಕ ಬೆಂಬಲ ಪಡೆಯಬೇಕಾದರೆ ಪಾಕಿಸ್ತಾನ ಹೊಸ ಹೋರಾಟ ನಡೆಸಬೇಕಾಗುತ್ತದೆ ಎಂದು ಖುರೇಷಿ ಹೇಳಿದ್ದಾರೆ.

click me!