ಹೋಟೆಲ್'ಗಳ ಬಳಿ ಮಾಂಸಾಹಾರದ ನಾಮಫಲಕ ನಿಷೇಧ: ದೆಹಲಿ ಪಾಲಿಕೆಯಿಂದ ಆದೇಶ

By Suvarna Web DeskFirst Published Dec 28, 2017, 9:16 PM IST
Highlights

ದಕ್ಷಿಣ ದೆಹಲಿ ಮಹಾನಗರ ಪಾಲಿಕೆಹೋಟಲಿನ ಹೊರಗೆ ಮಾಂಸಾಹಾರವಿರುವ ಫಲಕಗಳನ್ನು ಪ್ರದರ್ಶಿಸಬಾರದು, ಮಾರಾಟ ಮಾಡಿದರೂ ಕಣ್ಣಿಗೆ ಕಾಣುವಂತಿರಬಾರದು

ನವದೆಹಲಿ(ಡಿ.28): ಮಾಂಸಾಹಾರದ ನಾಮಫಲಕವನ್ನು ನಿಷೇಧಿಸಬೇಕೆಂದು ಬಿಜೆಪಿ ಆಡಳಿತವಿರುವ ಪಾಲಿಕೆ ಹೋಟೆಲ್'ಗಳಿಗೆ ಸೂಚನೆ ನಿಡಿದೆ.

ದಕ್ಷಿಣ ದೆಹಲಿ ಮಹಾನಗರ ಪಾಲಿಕೆ  ಹೋಟಲಿನ ಹೊರಗೆ ಮಾಂಸಾಹಾರವಿರುವ ಫಲಕಗಳನ್ನು ಪ್ರದರ್ಶಿಸಬಾರದು, ಮಾರಾಟ ಮಾಡಿದರೂ ಕಣ್ಣಿಗೆ ಕಾಣುವಂತಿರಬಾರದು ಎಂದು ಸೂಚನೆ ನೀಡಿದೆ. ಫಲಕವು ಜನರ ಭಾವನೆಗಳಿಗೆ ಪರಿಣಾಮ ಬೀರುವ ಕಾರಣ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ' ಎಂದು ಇತ್ತೀಚಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ' ಎಂದು ದಕ್ಷಿಣ ದೆಹಲಿ ಮಹಾನಗರ ಪಾಲಿಕೆಯ ಶಿಖಾ ರಾಯ್ ತಿಳಿಸಿದ್ದಾರೆ.

ನಾವು ಮಾಂಸಹಾರ ಮಾರಾಟವನ್ನು ನಿಲ್ಲಿಸುತ್ತಿಲ್ಲ ಬದಲಿಗೆ ಪ್ರದರ್ಶನ ಹಾಗೂ ತೋರ್ಪಡಿಕೆಯನ್ನು ನಿಲ್ಲಿಸುತ್ತಿದ್ದೇವೆ. ಈ ಬಗ್ಗೆ ತೀಕ್ಷವಾಗಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪಾಲಿಕೆ ಸದಸ್ಯ ಅಭಿಷೇಕ್ ದತ್ ' ಬಿಜೆಪಿ ಆಡಳಿತ ಪಾಲಿಕೆ ನಿರ್ಧಾರ ಸರ್ವಧಿಕಾರಿಯಿಂದ ಕೂಡಿದ್ದು ಜನರ ಖಾಸಗಿ ಬದುಕಿನ ಮೇಲೆ ಹಸ್ತಕ್ಷೇಪ ಮಾಡಲಾಗುತ್ತಿದೆ'. ಎಂದು ಆರೋಪಿಸಿದ್ದಾರೆ.

ಭಾರತೀಯ ವೈದಕೀಯ ಸಂಘದ ಅಧ್ಯಕ್ಷರಾದ' ಕೆಕೆ ಅಗರ್'ವಾಲ್ ' ಈ ಬಗ್ಗೆ ಪ್ರತಿಕ್ರಿಯೆ ನೀಡಿ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಕೇವಲ ಮಾಂಸಾಹಾರದ ಜೊತೆ ಸಸ್ಯಾಹಾರವನ್ನು ನಿಷೇಧಿಸಬೇಕು. ಹೊರಗಡೆ ತಯಾರಾಗುವ ಪದಾರ್ಥಗಳು ಯಾವುದೇ ಇದ್ದರೂ ಸಾರ್ವಜನಿಕರಿಗೆ ತೊಂದರೆಯೇ' ಎಂದಿದ್ದಾರೆ.

click me!