
ಬೆಂಗಳೂರು (ನ. 27): ಮಣಭಾರದ ಶಾಲಾ ಬ್ಯಾಗ್ ಹೊರೆಯಿಂದ ವಿದ್ಯಾರ್ಥಿಗಳನ್ನು ಪಾರು ಮಾಡಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಅಧೀನದಲ್ಲಿ ಬರುವ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಮಂಡಳಿ (ಎನ್‌ಸಿಇಆರ್‌ಟಿ), ತರಗತಿ ಆಧಾರದ ಮೇಲೆ ಬ್ಯಾಗ್ ತೂಕ ನಿಗದಿ ಮಾಡಿ ಸುತ್ತೋಲೆ ಹೊರಡಿಸಿದೆ.
ಇದೇ ವೇಳೆ 1 ಹಾಗೂ 2 ನೇ ತರಗತಿ ಮಕ್ಕಳಿಗೆ ಹೋಮ್‌ವರ್ಕ್ ನೀಡಕೂಡದು ಎಂದೂ ಅದು ಸೂಚಿಸಿದೆ. ದೇಶದ ಎಲ್ಲಾ ರಾಜ್ಯ ಸರ್ಕಾರಗಳು ಈ ಆದೇಶವನ್ನು ಪಾಲಿಸುವಂತೆ ಸೂಚನೆ ನೀಡಿದೆ. ಇದೇ ವೇಳೆ ೧ ಮತ್ತು ೨ನೇ ತರಗತಿಯ ಮಕ್ಕಳಿಗೆ ಹೋಮ್ ವರ್ಕ್ ನೀಡುವುದಕ್ಕೆ ನಿರ್ಬಂಧ ವಿಧಿಸಿರುವ ಎನ್ ಸಿಇಆರ್‌ಟಿ, ‘ಗಣಿತ ಮತ್ತು ಭಾಷೆಯನ್ನು ಹೊರತುಪಡಿಸಿದರೆ ಮಿಕ್ಕ ಯಾವ ವಿಷಯಗಳನ್ನೂ 1 ಹಾಗೂ ೨ನೇ ತರಗತಿ ಮಕ್ಕಳಿಗೆ ಬೋಧಿಸುವಂತಿಲ್ಲ. ಇನ್ನು 3 ರಿಂದ 5 ನೇ ಕ್ಲಾಸಿನ ಮಕ್ಕಳಿಗೆ ಭಾಷೆ, ಗಣಿತ ಹಾಗೂ ಇವಿಎಸ್ ವಿಷಯಗಳನ್ನು ಬಿಟ್ಟು ಮಿಕ್ಕ ವಿಷಯ ಬೋಧಿಸುವಂತಿಲ್ಲ’ ಎಂದಿದೆ.
ಶೀಘ್ರ ರಾಜ್ಯದಿಂದಲೂ ಸುತ್ತೋಲೆ:ಈ ಕುರಿತು ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಸಿ. ಜಾಫರ್, ರಾಜ್ಯದಲ್ಲಿ ಈಗಾಗಲೇ ಶಾಲಾ ಬ್ಯಾಗ್ ತೂಕ ಎಷ್ಟಿರಬೇಕು ಎಂಬುದರ ಬಗ್ಗೆ ಸರ್ವೆ ನಡೆಸಲಾಗಿದೆ. ಡಿಎಸ್‌ಇಆರ್‌ಟಿಯ ಮಾರ್ಗಸೂಚಿ ಕುರಿತು ವಿದ್ಯಾರ್ಥಿಗಳ ಅಭಿಪ್ರಾಯ ಸಹ ಸಂಗ್ರಹಿಸಲಾಗಿದೆ. ಸುತ್ತೋಲೆಯನ್ನು ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.