1, 2 ನೇ ಕ್ಲಾಸ್ ಮಕ್ಕಳಿಗೆ ಹೋಂ ವರ್ಕ್ ಇಲ್ಲ!

First Published Jun 4, 2018, 7:35 AM IST
Highlights

 ‘1 ಮತ್ತು 2 ನೇ ತರಗತಿ ವಿದ್ಯಾರ್ಥಿಗಳಿಗೆ ಹೋಂ ವರ್ಕ್ ನೀಡುವುದಕ್ಕೆ ನಿಷೇಧ ಮತ್ತು ಮಕ್ಕಳ ಬ್ಯಾಗ್‌ನ ತೂಕ ಕಡಿಮೆ ಮಾಡಬೇಕು’ ಎಂಬ ಮದ್ರಾಸ್ ಹೈಕೋರ್ಟ್‌ನ ಮಧ್ಯಂತರ ಆದೇಶದ ಬೆನ್ನಲ್ಲೇ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಜರುಗಿಸಲು ಮುಂದಾಗಿದೆ.

ಕೊಲ್ಕತಾ (ಜೂ. 04): ‘1 ಮತ್ತು 2 ನೇ ತರಗತಿ ವಿದ್ಯಾರ್ಥಿಗಳಿಗೆ ಹೋಂ ವರ್ಕ್ ನೀಡುವುದಕ್ಕೆ ನಿಷೇಧ ಮತ್ತು ಮಕ್ಕಳ ಬ್ಯಾಗ್‌ನ ತೂಕ ಕಡಿಮೆ ಮಾಡಬೇಕು’ ಎಂಬ ಮದ್ರಾಸ್ ಹೈಕೋರ್ಟ್‌ನ ಮಧ್ಯಂತರ ಆದೇಶದ ಬೆನ್ನಲ್ಲೇ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಜರುಗಿಸಲು ಮುಂದಾಗಿದೆ.

1 ಮತ್ತು 2 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಹೋಂ ವರ್ಕ್ ನೀಡದಂತೆ ಶಾಲೆಗಳಿಗೆ ಸೂಚಿಸುವ ಮಸೂದೆಯನ್ನು  ಮಂಡಿಸುವುದಾಗಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಜಾವಡೇಕರ್, ‘ಮೋಜಿನೊಂದಿಗೆ ಮಕ್ಕಳು ವಿದ್ಯಾಭ್ಯಾಸ ಮಾಡಬೇಕು ಎಂಬುದರಲ್ಲಿ ನಂಬಿಕೆ  ಹೊಂದಿದ್ದೇನೆ. ಮಕ್ಕಳನ್ನು ಓದಿನ ಒತ್ತಡದಲ್ಲಿ ಸಿಲುಕಿಸಬಾರದು. ವಿದ್ಯಾರ್ಥಿಗಳಿಗೆ ಹೋಂ ವರ್ಕ್
ನೀಡದಂತೆ ಸೂಚಿಸುವ ಮಸೂದೆಯನ್ನು ಮುಂಬರುವ ಮುಂಗಾರು ಅಧಿವೇಶನದಲ್ಲಿ ಮಂಡಿಸಲಾಗುತ್ತದೆ. ಅದು ಪಾಸಾಗಲಿದೆ ಎಂಬ ವಿಶ್ವಾಸವನ್ನು ನಾನು ಹೊಂದಿದ್ದೇನೆ. ನ್ಯಾಯಾಲಯದ ಆದೇಶವನ್ನು ನಾನು ಸ್ವಾಗತಿಸುತ್ತೇನೆ’ ಎಂದು ಹೇಳಿದರು. ಅಲ್ಲದೆ, ಮಕ್ಕಳ ಮೇಲಿನ ಒತ್ತಡ ಹೇರುವ ಕ್ರಮಗಳನ್ನು ತೆಗೆದು ಹಾಕಲು ತಮ್ಮಿಂದಾಗುವ ಎಲ್ಲ ಕಾರ್ಯ ಮಾಡುವುದಾಗಿ ಅವರು ತಿಳಿಸಿದರು

click me!