ಮೆಟ್ರೋ ಮಾರ್ಗ ಬದಲಾವಣೆಗೆ 3 ನಿಮಿಷಗಳ ಕಾಲಾವಕಾಶ

First Published Jun 3, 2018, 6:02 PM IST
Highlights

ನಗರದ ಕೆಂಪೇಗೌಡ ಮೆಟ್ರೋ ರೈಲು ನಿಲ್ದಾಣದಲ್ಲಿ ರೈಲು ಬದಲಾವಣೆಗೆ ಇದ್ದ ಅವಧಿಯನ್ನು ಹೆಚ್ಚಳ ಮಾಡಿದೆ. ಕೆಂಪೇಗೌಡ ಮೆಟ್ರೋ ರೈಲು ನಿಲ್ದಾಣ ದೇಶದ ಜನನಿಬಿಡ ರೈಲು ನಿಲ್ದಾಣಗಳಲ್ಲಿ ಒಂದಾಗಿದ್ದು, ದಿನವೊಂದಕ್ಕೆ ಸುಮಾರು 27 ಸಾವಿರ ಪ್ರಯಾಣಿಕರು ಈ ನಿಲ್ದಾಣದಿಂದ ಸಂಚರಿಸುತ್ತಾರೆ.

ಬೆಂಗಳೂರು(ಜೂ.3): ನಗರದ ಕೆಂಪೇಗೌಡ ಮೆಟ್ರೋ ರೈಲು ನಿಲ್ದಾಣದಲ್ಲಿ ರೈಲು ಬದಲಾವಣೆಗೆ ಇದ್ದ ಅವಧಿಯನ್ನು ಹೆಚ್ಚಳ ಮಾಡಿದೆ. ಕೆಂಪೇಗೌಡ ಮೆಟ್ರೋ ರೈಲು ನಿಲ್ದಾಣ ದೇಶದ ಜನನಿಬಿಡ ರೈಲು ನಿಲ್ದಾಣಗಳಲ್ಲಿ ಒಂದಾಗಿದ್ದು, ದಿನವೊಂದಕ್ಕೆ ಸುಮಾರು27 ಸಾವಿರ ಪ್ರಯಾಣಿಕರು ಈ ನಿಲ್ದಾಣದಿಂದ ಸಂಚರಿಸುತ್ತಾರೆ.

ಈ ಮೊದಲು ರೈಲು ಬದಲಾವಣೆಗೆ ಕಡಿಮೆ ಅವಧಿ ಮೀಸಲಿದ್ದ ಪರಿಣಾಮ, ಪ್ರಯಾಣಿಕರು ಬೇರೆ ರೈಲು ಹತ್ತಲು ಪರದಾಡಬೇಕಿತ್ತು. ಇದೀಗ ನೇರಳೆ ಲೇನ್ [ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ] ಮತ್ತು ಗ್ರೀನ್ ಲೇನ್[ನಾಗಸಂದ್ರದಿಂದ ಎಲಚೇನಹಳ್ಳಿ] ಮಾರ್ಗದ ರೈಲುಗಳ ಸಮಯದಲ್ಲಿ ತುಸು ಬದಲಾವಣೆ ಮಾಡಲಾಗಿದೆ.

ಇದರಿಂದ ಈ ಎರಡೂ ಮಾರ್ಗಗಳ ರೈಲುಗಳು ಮೆಜೆಸ್ಟಿಕ್ ತಲುಪಲು ಈ ಮೊದಲು ಇದ್ದ ಸಮಯದ ಅವಧಿಯಲ್ಲಿ ಬದಲಾವಣೆಯಾಗಿದ್ದು, ಪ್ರಯಾಣಿಕರಿಗೆ ಮೆಜೆಸ್ಟಿಕ್ ನಲ್ಲಿ ಒಂದು ರೈಲಿನಿಂದ ಮತ್ತೊಂದು ರೈಲಿಗೆ ಮಾರ್ಗ ಬದಲಾಯಿಸಲು 3 ನಿಮಿಷಗಳ ಕಾಲಾವಕಾಶ ಸಿಗಲಿದೆ.    

click me!