ಉ.ಪ್ರ: ಮಹಾಮೈತ್ರಿ ವಿಚಾರ ತಳ್ಳಿಹಾಕಿದ ಮುಲಾಯಮ್ ಸಿಂಗ್

By Suvarna Web DeskFirst Published Nov 10, 2016, 5:53 AM IST
Highlights

ಸಮಾಜವಾದಿ ಪಕ್ಷವು ಯಾವುದೇ ರೀತಿಯ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿರುವ ಮುಲಾಯಮ್, ಇತರ ಪಕ್ಷಗಳು ಬಯಸಿದ್ದಲ್ಲಿ ಸಮಾಜವಾದಿ ಪಕ್ಷದೊಂದಿಗೆ ವಿಲೀನವಾಗಬಹುದು ಎಂದು ಅವರು ಹೇಳಿದ್ದಾರೆ.

ಲಕ್ನೋ (ನ.10): ಮುಂಬರುವ ವಿಧಾನಸಭಾ ಚುನಾವಣೆಗೆ ಸಮಾಜವಾದಿ ಪಕ್ಷವು ಯಾವುದೇ ‘ಮಹಾಮೈತ್ರಿ’ ಮಾಡಿಕೊಳ್ಳುವುದಿಲ್ಲವೆಂದು ಪಕ್ಷದ ವರಿಷ್ಠ ಮುಲಾಯಮ್ ಸಿಂಗ್ ಯಾದವ್ ಹೇಳಿದ್ದಾರೆ.

ಸಮಾಜವಾದಿ ಪಕ್ಷವು ಏಕಾಂಗಿಯಾಗಿ ಮುಂಬರುವ ಚುನಾವಣೆಯನ್ನು ಎದುರಿಸಲಿದೆ, ಸಮಾಜವಾದಿ ಪಕ್ಷವು ಯಾವುದೇ ರೀತಿಯ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿರುವ ಮುಲಾಯಮ್, ಇತರ ಪಕ್ಷಗಳು ಬಯಸಿದ್ದಲ್ಲಿ ಸಮಾಜವಾದಿ ಪಕ್ಷದೊಂದಿಗೆ ವಿಲೀನವಾಗಬಹುದು ಎಂದು ಅವರು ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ ಲಕ್ನೋನಲ್ಲಿ ನಡೆದ ಸಮಾಜವಾದಿ ಪಕ್ಷದ ರಜತ ಮಹೋತ್ಸವದಲ್ಲಿ ಆರ್’ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್, ಜೆಡಿಯು ಮುಖಂಡ ಶರದ್ ಯಾದವ ಹಾಗೂ ಇನ್ನಿತರ ಪಕ್ಷಗಳ ನಾಯಕರ ಭಾಗವಹಿಸುವಿಕೆಯು, ಬಿಹಾರ ಮಾದರಿಯ ಮಹಾಮೈತ್ರಿ ರಚನೆಯಾಗುವ ಬಗ್ಗೆ ಊಹಾಪೋಹಗಳನ್ನು ಸೃಷ್ಟಿಸಿತ್ತು.

click me!