ಸಚಿವರ ಅನುದಾನಕ್ಕೆ ಸರ್ಕಾರದಿಂದ ಬ್ರೇಕ್

By Web DeskFirst Published Jul 25, 2018, 11:48 AM IST
Highlights

ರಾಜ್ಯದಲ್ಲಿ ಕೋಟ್ಯಂತರ ರು. ವೆಚ್ಚ ಮಾಡಿ ಸಚಿವರ ಸರ್ಕಾರಿ ನಿವಾಸವನ್ನು ನವೀಕರಣ ಮಾಡುವುದಕ್ಕೆ ಆರ್ಥಿಕ ಇಲಾಖೆಯು ಯಾವುದೇ ಅನುದಾನ ಬಿಡುಗಡೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.  

ಬೆಂಗಳೂರು: ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳು ಕೋಟ್ಯಂತರ ರು. ವೆಚ್ಚ ಮಾಡಿ ಸರ್ಕಾರಿ ನಿವಾಸವನ್ನು ನವೀಕರಣ ಮಾಡುವುದಕ್ಕೆ ಆರ್ಥಿಕ ಇಲಾಖೆಯು ಯಾವುದೇ ಅನುದಾನ ಬಿಡುಗಡೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. 

ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರಿ ಮನೆಗಳನ್ನು ಸಚಿವರು ನವೀಕರಣ ಮಾಡಲು ಕಡಿವಾಣ ಹಾಕಲಾಗಿದೆ. ಕೋಟ್ಯಂತರ ರು. ವೆಚ್ಚ ಮಾಡಬಾರದು ಎಂದು ನವೀಕರಣಕ್ಕೆ ಅನುಮತಿ ನೀಡಿಲ್ಲ. ಆರ್ಥಿಕ ಇಲಾಖೆ ಸಹ ಯಾವುದೇ ಸಚಿವರಿಗೂ ಅನುದಾನ ಬಿಡುಗಡೆ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. 

ಸಚಿವ ಎಚ್.ಡಿ.ರೇವಣ್ಣ ಕೋಟ್ಯಂತರ ರು.ಖರ್ಚು ಮಾಡಿ ಮನೆ ನವೀಕರಿಸುತ್ತಿದ್ದಾರೆ ಎಂಬುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ.  ದು ಸತ್ಯಕ್ಕೆ ದೂರವಾದದ್ದು. ಕುಮಾರಕೃಪ ಅತಿಥಿಗೃಹದ ಆವರಣದಲ್ಲಿ ಇತ್ತೀಚೆಗೆ ಹೊಸಕಟ್ಟಡ ನಿರ್ಮಿಸಲಾಗಿದೆ. ಮನೆಯ ಕಾಂಪೌಂಡ್ ಗೋಡೆ ಕುಸಿದಿದೆ. ಅದರ ದುರಸ್ತಿ ಮತ್ತು ಸಚಿವರ ಮನೆಯ ಬಳಿಯಿರುವ ರೈಲ್ವೆ ಟ್ರ್ಯಾಕ್‌ನಿಂದ ಆಚೆಗೆ ಪೈಪ್‌ಲೈನ್ ಅಳವಡಿಸುವ ಕಾಮಗಾರಿಗೆ ಡಿಸೆಂಬರ್ ತಿಂಗಳಲ್ಲಿಯೇ ಆದೇಶ ನೀಡಲಾಗಿದೆ ಎಂದರು.

click me!