ಕೋಲಾರದಲ್ಲಿ ಐ ಫೋನ್ ತಯಾರಿಕಾ ಘಟಕ ಆರಂಭ

By Web DeskFirst Published Jul 25, 2018, 11:35 AM IST
Highlights

ಕೋಲಾರ  ಜಿಲ್ಲೆಯಲ್ಲಿ ತೈವಾನಿನ ವಿಸ್ಟನ್ ಟೆಕ್ನಾಲಜಿ ಕಂಪನಿ ಐಪೋನ್ ತಯಾರಿಸುವ ಘಟಕ ಸ್ಥಾಪನೆಗೆ ಮೂರು ಸಾವಿರ ಕೋಟಿ ರು. ಬಂಡವಾಳ ಹೂಡಲು ಮುಂದಾಗಿದ್ದು, ಇದರಿಂದ ರಾಜ್ಯದಲ್ಲಿ ಬ್ೃಹತ್ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ. 

ಕೋಲಾರ :  ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ತೈವಾನಿನ ವಿಸ್ಟನ್ ಟೆಕ್ನಾಲಜಿ ಕಂಪನಿ ಐಪೋನ್ ತಯಾರಿಸುವ ಘಟಕ ಸ್ಥಾಪನೆಗೆ ಮೂರು ಸಾವಿರ ಕೋಟಿ ರು. ಬಂಡವಾಳ ಹೂಡಲು ಮುಂದೆ ಬಂದಿದೆ ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಕಂಪನಿಯ ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಘಟಕ ಸ್ಥಾಪನೆಗೆ 42 ಎಕರೆ ಭೂಮಿಯನ್ನು ನೀಡಲಾಗುವುದು, ಸುಮಾರು 15 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದರು. ಈ ಘಟಕದ ಜೊತೆಗೆ ಬಳಸಿದ ಮೊಬೈಲ್ ಫೋನ್‌ಗಳ  ಬಿಡಿಭಾಗಗಳ ಮರು ಬಳಕೆ ಮಾಡುವ ಘಟಕ ಸ್ಥಾಪಿಸುವ ಬಗ್ಗೆ ಕಂಪನಿಯ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ.

ರಾಜ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡಲು ಸರ್ಕಾರ ಬದ್ಧವಾಗಿದೆ.  ಬಜೆಟ್‌ನಲ್ಲಿ ಘೋಷಿಸಿರುವು ದನ್ನು ಜಾರಿ ಮಾಡಲಾಗುವುದು ಎಂದರು. ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

click me!