ಮ್ಯಾಗಜಿನ್ ಮುಖಪುಟಕ್ಕೆ ನಗ್ನ ಪೋಸ್ ಕೊಟ್ಟರಾ ದೀಪಿಕಾ?

Published : Aug 04, 2017, 12:39 AM ISTUpdated : Apr 11, 2018, 01:06 PM IST
ಮ್ಯಾಗಜಿನ್ ಮುಖಪುಟಕ್ಕೆ ನಗ್ನ ಪೋಸ್ ಕೊಟ್ಟರಾ ದೀಪಿಕಾ?

ಸಾರಾಂಶ

ಮ್ಯಾಗಜಿನ್ ಮುಖಪುಟದಲ್ಲಿ ಕ್ಯಾಮರಾಗೆ ಹಿಮ್ಮುಖವಾಗಿ ಬೆತ್ತಲೆಯಾಗಿ ನಿಂತಿರುವ ಪುರುಷ ಮಾಡೆಲ್ ಜತೆಗೆ ವಿವಸ್ತ್ರವಾಗಿ ಕ್ಯಾಮೆರಾವನ್ನು ಮೋಹಕ ನೋಟದಿಂದ ನೋಡುತ್ತಾ ನಿಂತಿರುವ ದೀಪಿಕಾ ಪಡುಕೋಣೆ ಅವರ ಫೋಟೋವನ್ನು ಪ್ರಕಟಿಸಲಾಗಿದೆ

ಬಾಲಿವುಡ್ ಸಿನಿಮಾ ರಂಗದಲ್ಲಿ ಸೈ ಎನಿಸಿಕೊಂಡು, ಇದೀಗ ಹಾಲಿವುಡ್‌ಗೆ ಜಿಗಿದಿರುವ ನಟಿ ದೀಪಿಕಾ ಪಡುಕೋಣೆ ಅವರು ನಗ್ನವಾಗಿ ಫೋಟೋಗೆ ಪೋಸ್ ನೀಡಿದ್ದಾರೆ ಎಂದರೆ ನಂಬಲು ಸಾಧ್ಯವೇ? ಆದರೆ, ಬಾಲಿವುಡ್ ಸೇರಿದಂತೆ ಇತರ ಸಿನಿಮಾ ರಂಗದ ಖ್ಯಾತನಾಮರ ಫೋಟೋಗಳನ್ನು ಪ್ರಕಟಿಸುವ ‘ಮ್ಯಾಕ್ಸಿಮ್’ ಎಂಬ ನಿಯತಕಾಲಿಕೆಯಲ್ಲಿ ದೀಪಿಕಾ ಪಡುಕೋಣೆ ಅವರ ನಗ್ನ ಚಿತ್ರ ಪ್ರಕಟವಾಗಿದೆ ಎಂದು ಹೇಳಲಾಗುತ್ತಿದೆ. ಇದರನ್ವಯ ಮ್ಯಾಗಜಿನ್ ಮುಖಪುಟದಲ್ಲಿ ಕ್ಯಾಮರಾಗೆ ಹಿಮ್ಮುಖವಾಗಿ ಬೆತ್ತಲೆಯಾಗಿ ನಿಂತಿರುವ ಪುರುಷ ಮಾಡೆಲ್ ಜತೆಗೆ ವಿವಸ್ತ್ರವಾಗಿ ಕ್ಯಾಮೆರಾವನ್ನು ಮೋಹಕ ನೋಟದಿಂದ ನೋಡುತ್ತಾ ನಿಂತಿರುವ ದೀಪಿಕಾ ಪಡುಕೋಣೆ ಅವರ ಫೋಟೋವನ್ನು ಪ್ರಕಟಿಸಲಾಗಿದೆ ಎಂದು ವಾಟ್ಸ್‌ಆ್ಯಪ್, ಫೇಸ್‌ಬುಕ್ ಸೇರಿದಂತೆ ಇನ್ನಿತರ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದೆ.

ಆದರೆ ಬಾಲಿವುಡ್, ಸ್ಯಾಂಡಲ್‌ವುಡ್ ಸೇರಿದಂತೆ ಇನ್ನಿತರ ಚಿತ್ರೋದ್ಯಮಗಳಲ್ಲಿ ಇಂಥ ಗಾಸಿಪ್ ಸುದ್ದಿಗಳಿಗೆ ಬರವಿಲ್ಲ. ಈ ಕಾರಣಕ್ಕಾಗಿಯೇ, ಈ ಫೋಟೋೀ ನಿಜವಾಗಿಯೂ ‘ಮ್ಯಾಕ್ಸಿಮ್’ ನಿಯತಕಾಲಿಕೆಯಲ್ಲಿ ಪ್ರಕಟವಾಗಿದ್ದೇ ಅಥವಾ ಫೋಟೋಶಾಪ್ ಮಾಡಿರುವಂಥದ್ದೆ ಎಂಬುದರ ಕುರಿತು ಕೆದಕಲಾಯಿತು. ಈ ಸಂದರ್ಭದಲ್ಲಿ ತಿಳಿದು ಬಂದಿರುವ ಸಂಗತಿಯೆಂದರೆ, ಯಾರದ್ದೋ ಫೋಟೋಗೆ ದೀಪಿಕಾ ಪಡುಕೋಣೆ ಅವರ ಮುಖವನ್ನು ಫೋಟೋಶಾಪ್‌ನಲ್ಲಿ ಸೇರ್ಪಡೆಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಹಾಗಾಗಿ, ದೀಪಿಕಾ ಪಡುಕೋಣೆ ಯಾವುದೇ ನಿಯತಕಾಲಿಕೆಗೆ ನ್ಯೂಡ್ ಪೋಸ್ ನೀಡಿಲ್ಲ. ಆದರೆ, ಗಾಳಿ ಸುದ್ದಿಗೆ ಆಹಾರವಾಗಿದ್ದಾರೆ ಎಂಬುದು ಇದರಿಂದ ಖಾತ್ರಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕುರ್ಚಿ ಸರ್ಕಸ್‌ ಮಧ್ಯೆ ಇಂದು ಸಿದ್ದು ದೆಹಲಿಗೆ - ನಾಳೆ ಸಿಡಬ್ಲುಸಿ ಸಭೆಯಲ್ಲಿ ಸಿಎಂ ಭಾಗಿ
ಸಲಹೆ ಕೊಟ್ಟರೆ ದುರಹಂಕಾರದ ಮಾತು: ರಾಜ್ಯ ಸರ್ಕಾರದ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ