ಫೆ.4ರಂದು ಬೆಂಗಳೂರು ಬಂದ್ ಇಲ್ಲ: ಮುಂದಿನ ದಿನಗಳಲ್ಲಿ ಜೈಲು ಚಳವಳಿ, ರೈಲ್,ಹೆದ್ದಾರಿ ತಡೆ

By Suvarna Web deskFirst Published Feb 2, 2018, 8:31 PM IST
Highlights

ನಮಗೂ ಪದೇ ಪದೇ ಬಂದ್ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುವುದು ಗೊತ್ತು. ಆದರೆ , ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸದಿದ್ದರೆ ಏನು ಮಾಡಬೇಕು

ಬೆಂಗಳೂರು(ಫೆ.02): ನ್ಯಾಯಾಲಯದ ತೀರ್ಪಿಗೆ ತಲೆಭಾಗಿ ಫೆ.4 ರಂದು ಹಮ್ಮಿಕೊಳ್ಳಲಾಗಿದ್ದ ಬೆಂಗಳೂರು ಬಂದ್'ಅನ್ನು ಕೈಬಿಟ್ಟಿದ್ದು ಬದಲಿಗೆ ಫ್ರೀಡಂ ಪಾರ್ಕ್'ನಲ್ಲಿ ಕರಾಳ ದಿನ ಆಚರಿಸಲಾಗುವುದು' ಎಂದು ಕನ್ನಡ ಚಳವಳಿ ಪಕ್ಷದ ಮುಖಂಡ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ತೀರ್ಪಿಗೆ ತಲೆಭಾಗಿ ಬಂದ್ ಕೈಬಿಟ್ಟಿದ್ದೇವೆ. ಬಂದ್ ವಿರುದ್ಧದ ನ್ಯಾಯಾಲಯದ ತೀರ್ಪು ವಿರೋಧಿಸದೆ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಿದ್ದೇವೆ. ನಮಗೂ ಪದೇ ಪದೇ ಬಂದ್ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುವುದು ಗೊತ್ತು. ಆದರೆ , ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸದಿದ್ದರೆ ಏನು ಮಾಡಬೇಕು' ಎಂದು ಪ್ರಶ್ನಿಸಿದರು.

ಮಹದಾಯಿ, ಕಳಸಾ ಬಂಡೂರಿ ವಿಚಾರವಾಗಿ ಬಿಜೆಪಿ ತುಟಿ ಬಿಚ್ಚುತ್ತಿಲ್ಲ. ನಮ್ಮನ್ನು ಕಾಂಗ್ರೆಸ್ ಎಜೆಂಟ್ ಎಂದು ಕರೆಯುತ್ತೀರಿ. ಮೂರು ವರ್ಷದಿಂದ ಹೋರಾಟ ನಡೆಸುತ್ತಿದ್ದರೂ ಬಿಜೆಪಿ ನಾಯಕರು ಸ್ಪಂದಿಸಿಲ್ಲ. ನಮ್ಮ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಿ. ನಾಯಿಗೆ ಇರುವ ನಿಯತ್ತು ಬಿಜೆಪಿ ಅವರಿಗೆ ಇಲ್ಲ

ಈ ಬಂದ್'ಗೆ ಇಡೀ ಪ್ರಾಣವನ್ನೇ  ಮೀಸಲಿಟ್ಟಿದ್ದೇವೆ. ಅಮಿತ್ ಶಾ ಜ. 25 ರಾಜ್ಯಕ್ಕೆ ಬಂದಾಗ ಮಹದಾಯಿ ಬಗ್ಗೆ ಒಂದು ಮಾತು ಕೂಡ ಆಡಲಿಲ್ಲ. ಹೋರಾಟ ಹತ್ತಿಕ್ಕುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಜೈಲು ಚಳವಳಿ, ರೈಲ್, ರಾಷ್ಟ್ರೀಯ ಹೆದ್ದಾರಿ ತಡೆಯುತ್ತೇವೆ' ಎಂದು ತಿಳಿಸಿದರು.

click me!