
ಲಕ್ನೋ: ಉತ್ತರ ಪ್ರದೇಶದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ‘ರಾಮ ಮಂದಿರ’ ನಿರ್ಮಿಸುವ ಶಪಥ ಮಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಗೃಹ ರಕ್ಷಕ ದಳದ ಮಹಾ ನಿರ್ದೇಶಕರಾಗಿರುವ ಸೂರ್ಯ ಕುಮಾರ್ ಶುಕ್ಲಾ ಎಂಬವರು , ‘ನಾವು ರಾಮ ಭಕ್ತರು ಆದಷ್ಷು ಬೇಗ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವ ಪ್ರತಿಜ್ಞೆ ಮಾಡತ್ತೇವೆ’ ಎನ್ನುವ ವಿಡಿಯೋ ಬಹಿರಂಗವಾಗಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಲಕ್ನೋ ವಿವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಹಿಂದೂಗಳು ನ್ಯಾಯಾಲಯಗಳ ತೀರ್ಪಿಗೆ ಕಾಯದೇ, ಖುದ್ದಾಗಿ ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗಬೇಕೆಂದು ಶುಕ್ಲಾ ಹೇಳಿದ್ದಾರೆನ್ನಲಾಗಿದೆ.
ಹಿಂದೂಗಳು ಜಾಗೃತರಾಗಬೇಕು. ನೂರು ಕೋಟಿ ಜನಸಂಖ್ಯೆಯಿದ್ದರೂ ರಾಮ ಮಂದಿರ ನಿರ್ಮಿಸಲು ಸಾಧ್ಯವಾಗದಿರುವುದು ನಾಚಕೆಯ ವಿಷಯವೆಂದು, ಶುಕ್ಲಾ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.