
ಭೋಪಾಲ್: ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರವು ಜನರಲ್ಲಿ ‘ಆನಂದ’ ಪಸರಿಸಲು ‘ಆನಂದ ಇಲಾಖೆ’ಯನ್ನು ಹುಟ್ಟುಹಾಕಿತ್ತು. ಜನರಲ್ಲಿ ಆನಂದ ತರಲು ಸುಮಾರು 33 ಸಾವಿರ ‘ಆನಂದಕ’ರನ್ನೂ ನೇಮಿಸಲಾಗಿತ್ತು. ಆದರೆ ಖುದ್ದು ಈ ಆನಂದಕರಲ್ಲೇ ‘ಆನಂದ’ವಿಲ್ಲ!
ಹೌದು.. ಅಚ್ಚರಿ ಎನ್ನಿಸಿದರೂ ಸತ್ಯ. ಜನರು ಸಾವಿರಾರು ಕಷ್ಟ ಕೋಟಲೆಗಳನ್ನು ಅನುಭವಿಸುತ್ತಿರುವಾಗ ಅವರನ್ನು ಹೇಗೆ ಆನಂದವಾಗಿ ಇಡುವುದು ಎಂಬುದು ಆನಂದಕರ ದೊಡ್ಡ ಸಮಸ್ಯೆಯಾದರೆ, ಇನ್ನೊಂದೆಡೆ 33 ಸಾವಿರ ಆನಂದಕರಿಗೇ ಸೂಕ್ತ ಸಂಬಳ ದೊರಕುತ್ತಿಲ್ಲ.
ಆನಂದಕರ ಜವಾಬ್ದಾರಿಯೆಂದರೆ ಜನರನ್ನು ತಬ್ಬಿಕೊಂಡು ಆನಂದಗೊಳಿಸುವುದು, ಬಸ್ಸಿನಲ್ಲಿ ಅಗತ್ಯವಿದ್ದವರಿಗೆ ಸೀಟು ಬಿಡಿಸಿಕೊಡುವುದು, ಸರ್ಕಾರದ ಯೋಜನೆ ಜನರಿಗೆ ತಲುಪುವಂತಾಗುವಂತೆ ಮಾಡುವುದು, ಸಾರ್ವಜನಿಕರ ಸರ್ಕಾರಿ ಕೆಲಸ ಮಾಡಿಸಿಕೊಡುವುದು ಇತ್ಯಾದಿ.
ಆದರೆ ಬೆಳೆ ವೈಫಲ್ಯದಿಂದ ರೈತರ ಆತ್ಮಹತ್ಯೆ ಹೆಚ್ಚಾಗಿದೆ. ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಅಲ್ಲದೆ, ಕೆಲವು ಯೋಜನೆಗಳು ಕೇವಲ ಕಾಗದದಲ್ಲೇ ಉಳಿದಿವೆ. ಹೀಗಿದ್ದಾಗ ಜನರನ್ನು ನಾವು ಹೇಗೆ ಆನಂದದಿಂದ ಇಡುವುದು ಎಂದು ಪ್ರಶ್ನಿಸುತ್ತಾರೆ ಈಶ್ವರ ಪಾಟೀದಾರ್ ಎಂಬ ಆನಂದಕ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.