ಎಸ್'ಎಸ್'ಎಲ್'ಸಿ ವಿದ್ಯಾರ್ಥಿಗಳೇ ಹುಷಾರ್: ಒಂದು ನಿಮಿಷ ಲೇಟಾದ್ರು ನಿಮ್ಮ ಭವಿಷ್ಯ ಹಾಳಾಗುತ್ತೆ

By Suvarna Web DeskFirst Published Jan 11, 2017, 5:23 AM IST
Highlights

ಎಸ್'ಎಸ್'ಎಲ್ಸಿ ಪರೀಕ್ಷೆ ಪ್ರಾರಂಭವಾಗುವುದು ಬೆಳಿಗ್ಗೆ 9.30 ಗಂಟೆಗೆ. ಪರೀಕ್ಷೆಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳು 9.15ಕ್ಕೆ ಮೊದಲ ಲಾಂಗ್ ಬೆಲ್ ಹೊಡೆದ ನಂತರ ಕಡ್ಡಾಯವಾಗಿ ಪರೀಕ್ಷಾ ಕೊಠಡಿಗೆ ಹಾಜರಾಗಬೇಕು.

ಬೆಂಗಳೂರು(ಜ.11): ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯು ಎಸ್'ಎಸ್'ಎಲ್'ಸಿ ಪರೀಕ್ಷೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ  ಹೊಸ ನಿಯಮವನ್ನು ಜಾರಿಗೊಳಿಸಿದೆ. ಹೊಸ ನೀತಿಯಿಂದ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗೆ ಒಂದು ನಿಮಿಷ ತಡವಾಗಿ ಆಗಮಿಸಿದರೂ ಪರೀಕ್ಷೆಗೆ ಸೇರಿಸಲಾಗುವುದಿಲ್ಲ.

ಎಸ್'ಎಸ್'ಎಲ್ಸಿ ಪರೀಕ್ಷೆ ಪ್ರಾರಂಭವಾಗುವುದು ಬೆಳಿಗ್ಗೆ 9.30 ಗಂಟೆಗೆ. ಪರೀಕ್ಷೆಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳು 9.15ಕ್ಕೆ ಮೊದಲ ಲಾಂಗ್ ಬೆಲ್ ಹೊಡೆದ ನಂತರ ಕಡ್ಡಾಯವಾಗಿ ಪರೀಕ್ಷಾ ಕೊಠಡಿಗೆ ಹಾಜರಾಗಬೇಕು. ಬೆಳಗ್ಗೆ 9.25ಕ್ಕೆ ಎರಡನೇ ಲಾಂಗ್ ಬೆಲ್ ಹೊಡೆಯಲಿದ್ದು ಮುಖ್ಯ ಅಧೀಕ್ಷಕರು ಕೊಠಡಿ ಮೇಲ್ವೀಚಾರಕರ ಕೈಗೆ ಪ್ರಶ್ನೆ ಪತ್ರಿಕೆ ನೀಡುತ್ತಾರೆ. 9.30 ಕ್ಕೆ  ಹೊಡೆಯುವ ಮೂರನೇ ಲಾಂಗ್ ಬೆಲ್'ಗೆ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ವಿತರಿಸಲಾಗುತ್ತದೆ. ನಂತರ ಒಂದು ನಿಮಿಷವೂ ತಡವಾಗಿ ಬಂದ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸೇರಿಸಲಾಗುವುದಿಲ್ಲ.

ಮೊದಲೆಲ್ಲ 10,15 ನಿಮಿಷ ತಡವಾಗಿ ಆಗಮಿಸಿದರೂ ಮಾನವೀಯತೆ ದೃಷ್ಟಿಯಿಂದ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸೇರಿಸಲಾಗುತ್ತಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆ,ಪರೀಕ್ಷೆ ಪಾರದರ್ಶಕವಾಗಿ ನಡೆಯುವ ನಿಟ್ಟಿನಲ್ಲಿ ಈ ನಿಯಮ ಜಾರಿಗೊಳಿಸಲಾಗುತ್ತಿದೆ. ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯು ಡಿಡಿಪಿಐಗಳು, ಬಿಇಓಗಳ ಮೂಲಕ ಎಲ್ಲ ಶಾಲೆಗಳಿಗೆ ಸುತ್ತೋಲೆ ಕಳುಹಿಸಿದೆ. ಮಂಡಳಿ ಹೊಸ ನಿಯಮ ಜಾರಿಗೊಳಿಸುವ ಕಾರಣದಿಂದ ವಿದ್ಯಾರ್ಥಿಗಳೆಲ್ಲರೂ ಅರ್ಧ ಗಂಟೆ ಮುಂಚಿತವಾಗಿ ನಿಮ್ಮ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಿ ಇಲ್ಲದಿದ್ದರೆ ಒಂದು ವರ್ಷ ನಿಮ್ಮ ವಿದ್ಯಾರ್ಥ ಜೀವನ ಹಾಳುಗುತ್ತದೆ.

click me!