
ಹೊಸವರುಷದ ಆಗಮನವಾಗಿದೆ. ನಗರದ ಹಾಟ್ ಸ್ಪಾಟ್ ಎಂಜಿ ರಸ್ತೆಯಲ್ಲಿ ಯುವಕ ಯುವತಿಯರು ಹೊಸ ವರ್ಷವನ್ನ ಸಂಭ್ರಮದಿಂದ ಆಚರಣೆ ಮಾಡಿದ್ರು. ಆದ್ರೆ ಇಂತಹ ಸಂತಸದ ಜಾಗದಲ್ಲಿ ಕಿಡಿಗೇಡಿಗಳ ಕುಕೃತ್ಯಕ್ಕೂ ಸಾಕ್ಷಿಯಾಗಿದ್ದು ವಿಪರ್ಯಾಸ . ಸ್ಪಷ್ಟವಾದ ಕಾನೂನು ಉಲ್ಲಂಘನೆಗೆ ಟ್ರಾನ್ಸ್ಫರ್ ಕಾರಣನಾ ಅನ್ನೋ ಅನುಮಾನ ಶುರುವಾಗಿದೆ.
ಅದೆಷ್ಟೋ ಕನಸುಗಳು ಹಿಟ್ಟಿಕೊಳ್ಳೋ ದಿನ ಇದು. ಒಂದಷ್ಟು ಪಾರ್ಟಿ ಗಮ್ಮತ್ತುಗಳಿಂದ ಯುವಜನತೆ ಹೊಸ ವರ್ಷವನ್ನ ಆದರದಿಮದ ಬರಮಾಡಿಕೊಂಡ್ರು. ಇಂತಹ ಸಂಭ್ರಮಾಚರಣೆಗೆ ಸಾಕ್ಷಿಯಾಗಿದ್ದು. ಎಂಜಿ ರೋಡ್ ಅನ್ನೋ ಮಾಯಾ ಪ್ರಪಂಚ . ಆದರೆ ಸಾವಿರಾರು ಜನ ಸೇರೋ ಈ ಜಾಗದಲ್ಲಿ ಇಲ್ಲಿ ಹೆಣ್ಣು ಮಕ್ಕಳಿಗೆ ನಿಜವಾಗಿಯೂ ಸೇಫ್ಟಿ ಇತ್ತಾ ಅನ್ನೋ ಅನುಮಾನ ಶುರುವಾಗಿದೆ. ಕಾನೂನು ಸುವ್ಯವಸ್ಥೆ ಕೂಡ ಸ್ಪಷ್ಟವಾಗಿ ಉಲ್ಲಂಘನೆಯಾಗಿದೆ ಅನ್ನೋ ಆರೋಪ ಕೂಡ ಕೇಳಿ ಬರುತ್ತಿದೆ. ಈ ಆರೋಪಗಳಿಗೆ ಪುಷ್ಟಿ ನೀಡಿದ್ದು ಅಧಿಕಾರಿಗಳ ಸ್ಥಾನ ಪಲ್ಲಟ .
ಎಂಜಿ ರೋಡ್ಗೆ ಸಂಭ್ರಮಾಚರಣೆಗೆ ಬಂದವರಲ್ಲಿ ಹೆಚ್ಚಾಗಿ ಬರೋದೇ ಕಿಡಿಗೇಡಿಗಳು. ಗುಂಪಲ್ಲಿ ತಮ್ಮ ಕಾಮ ಚೇಷ್ಟೆ ನಡೆಸಿದ್ರೆ ಯಾವ ಪೊಲೀಸು ಏನು ಮಾಡಲ್ಲ ಅನ್ನೋ ಬಂಡ ಧೈರ್ಯ ಅವರಿಗೆ. ಪೊಲೀಸರು ಪಕ್ಕ ಲೆಕ್ಕ ಹಾಕಿ ಕೇಸು ಜಡಿದಿದ್ರೆ ಒಟ್ಟಾರೆಯಾಗಿ 200 ಕ್ಕೂ ಹೆಚ್ಚು ಅಸಭ್ಯ ವರ್ತನೆ ಪ್ರಕರಣಗಳು, ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗ್ತಿತ್ತೇನೋ . ಆದ್ರೆ ಪೊಲೀಸರು ತಲೆ ಕೆಡಿಸಿಕೊಳ್ಳಲೇ ಇಲ್ಲ .
ಇದಕ್ಕೆ ಕಾರಣ ಅಧಿಕಾರಿಗಳ ಮೇಜರ್ ಸರ್ಜರಿ. ನೂರಕ್ಕೂ ಹೆಚ್ಚು ಸಿಸಿಟಿವಿಗಳು ಸಾವಿರಕ್ಕೂ ಹೆಚ್ಚು ಪೊಲೀಸರು. ರಾಪಿಡ್ ಫೋರ್ಸ್ ಎಲ್ಲಾವೂ ಮೂಕವಾಗಿ ನೋಡುತ್ತಾ ನಿಂತಿದತ್ತೇ ಹೊರತು ತಮ್ಮ ಕೈಗಳಿಗೆ ಕೆಲಸ ಕೊಟ್ಟಿರಲಿಲ್ಲ . ಕಳೆದ ಬಾರಿ ಸಂಭ್ರಮಾಚರಣೆ ಬಳಿಕ ಕೆಲ ಕ್ಷಣಗಳೂ ಮಾತ್ರ ಎಂಜಿ ರಸ್ತೆಯಲ್ಲಿರುವ ಅವಕಾಶವಿತ್ತಾದರೂ ಈ ಬಾರಿ ಸಂಭ್ರಮಾಚರನೆಗೆಂದು ಬಂದವರನ್ನ ಚದುರಿಸಲು ಪೊಲೀಸರಿಗೆ ಹಿಡಿದ ಸಮಯ ಬರೋಬ್ಬರಿ ಎರಡು ಗಂಟೆಗಳು. ಗುಂಪಿನಲ್ಲಿ ಕಿಡಿಗೇಡಿಗಳು ಹುಡುಗೀಯರಿಗೆ ನೀಡೋ ಕಿರುಕುಳದ ಬಗ್ಗೆ ಪೊಲೀಸರಿಗೆ ತಿಳಿಸಿದರೂ ಪೊಲೀಸರಲ್ಲಿದ್ದದ್ದೂ ಸ್ಮಶಾಣ ಮೌನ. ಇನ್ನು ಸಂಭ್ರಮಾಚರಣೆಗೆ ಕೆಲ ಸಮಯವಿರಬೇಕಾದರೇ ಸರ್ಕಾರ ಟ್ರಾನ್ಸ್ಫರ್ ಪ್ರಮೋಷನ್ ಅನ್ನೋ ಸರ್ಜರಿ ನಡೆಸಿದ್ದು. ನಿರೀಕ್ಷೆಯೇ ಮಾಡಿರದ ತಲೆಗಳು ಉರುಳಿದ್ದು ಇದಕ್ಕೆ ಸ್ಪಷ್ಟ ಕಾರಣ. ಆ ಶಾಕ್ನಿಂದನೋ ಏನೋ ಪೊಲೀಸರು ಶಾಸ್ತ್ರಕ್ಕೆ ಲಾಟಿ ಬೀಸಿ ತಮ್ಮ ಕೆಲಸವನ್ನ ಮರೆತೇ ಬಿಟ್ಟಿದ್ದರು .
ವರದಿ: ಅಭಿಷೇಕ್ ಜೈಶಂಕರ್, ಸುವರ್ಣ ನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.