’ಮೈತ್ರಿಯಲ್ಲಿ ಬಿರುಕು ಇಲ್ಲ 206 ಸ್ಥಾನಗಳಲ್ಲಿ ವಿಜಯ’

Published : Sep 21, 2019, 09:48 AM IST
’ಮೈತ್ರಿಯಲ್ಲಿ ಬಿರುಕು ಇಲ್ಲ 206 ಸ್ಥಾನಗಳಲ್ಲಿ ವಿಜಯ’

ಸಾರಾಂಶ

ಮೈತ್ರಿಯಲ್ಲಿ ಬಿರುಕು ಇಲ್ಲ 206 ಸ್ಥಾನಗಳಲ್ಲಿ ವಿಜಯ: ನಿತೀಶ್‌ಕುಮಾರ್‌ ವಿಶ್ವಾಸ| ಸರ್ಕಾರ ಮತ್ತು ನನ್ನ ವಿರುದ್ಧ ವಿಪಕ್ಷಗಳು ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ. ಇದಕ್ಕೆ ಪಕ್ಷದ ನಾಯಕರು ಪ್ರತಿಕ್ರಿಯಿಸಬಾರದು

ಪಟನಾ[ಸೆ.21]: ಜೆಡಿಯು ಮತ್ತು ಬಿಜೆಪಿ ಭಾಗವಾಗಿರುವ ಎನ್‌ಡಿಎ ಮೈತ್ರಿಕೂಟದಲ್ಲಿ ಬಿರುಕು ಉಂಟಾಗಿಲ್ಲ. ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ 200 ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಮತ್ತು ಜೆಡಿಯು ಮಧ್ಯೆ ಅಂತರ ಉಂಟಾಗಿದೆ. ಇದು ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ವಿರೋಧಿಗಳ ಹೇಳಿಕೆಗೆ ನಿತೀಶ್‌ ಕುಮಾರ್‌ ತಿರುಗೇಟು ನೀಡಿದ್ದಾರೆ.

ಸರ್ಕಾರ ಮತ್ತು ನನ್ನ ವಿರುದ್ಧ ವಿಪಕ್ಷಗಳು ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ. ಇದಕ್ಕೆ ಪಕ್ಷದ ನಾಯಕರು ಪ್ರತಿಕ್ರಿಯಿಸಬಾರದು. ವಿಧಾನಸಭೆಯ 243 ಸ್ಥಾನಗಳಲ್ಲಿ 206 ಸ್ಥಾನಗಳಲ್ಲಿ ಮೈತ್ರಿಕೂಟ ವಿಜಯ ಸಾಧಿಸಲಿದೆ ಎಂದು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
ಕಳ್ಳತನ ಅವರ ಕುಟುಂಬ ವೃತ್ತಿ, ಅವರು ಮಹಾತ್ಮಗಾಂಧಿಯವರ ಉಪನಾಮವನ್ನೇ ಕದ್ದವರು : ಪ್ರಧಾನಿ