‘ಮೋದಿ ಕೊಲೆಗೆ ನಿತಿನ್ ಗಡ್ಕರಿ ಸಂಚು’: ಆರ್ ಎಸ್ ಎಸ್ ಸಾಥ್?

Published : Jun 10, 2018, 03:32 PM ISTUpdated : Jun 10, 2018, 03:38 PM IST
‘ಮೋದಿ ಕೊಲೆಗೆ ನಿತಿನ್ ಗಡ್ಕರಿ ಸಂಚು’: ಆರ್ ಎಸ್ ಎಸ್ ಸಾಥ್?

ಸಾರಾಂಶ

ಪ್ರಧಾನಿ ಮೋದಿ ಹತ್ಯೆಗೆ ನಿತಿನ್ ಗಡ್ಕರಿ ಸ್ಕೆಚ್? ಜೆಎನ್ ಯು ವಿದ್ಯಾರ್ಥಿ ಹಕ್ಕುಗಳ ಕಾರ್ಯಕರ್ತೆ ಆರೋಪ ಶೆಹ್ಲಾ ರಶೀದ್ ಟ್ವಿಟ್ ಗೆ ನಿತಿನ್ ಗಡ್ಕರಿ ಕೆಂಡಾಮಂಡಲ ಗಡ್ಕರಿಗೆ ಇದೆಯಂತೆ ಆರ್ ಎಸ್ ಎಸ್ ಬೆಂಬಲ

ನವದೆಹಲಿ(ಜೂ.10): ಆರ್‌ಎಸ್‌ಎಸ್ ಹಾಗೂ ಕೇಂದ್ರ ಸಚಿವ ನಿತಿನ್​ ಗಡ್ಕರಿ ಸೇರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆಗೈಯಲು ಸಂಚು ರೂಪಿಸಿದ್ದಾರೆ ಎಂದು, ಜೆಎನ್‌ಯು ವಿದ್ಯಾರ್ಥಿ ಹಕ್ಕುಗಳ ಕಾರ್ಯಕರ್ತೆ ಶೆಹ್ಲಾ ರಶೀದ್ ಗಂಭೀರ ಆರೋಪ ಮಾಡಿದ್ದಾರೆ. 

ಈ ಕುರಿತು ಟ್ವಿಟ್ ಮಾಡಿರುವ ಶೆಹ್ಲಾ ರಶೀದ್, ಮೋದಿ ಅವರನ್ನು ಕೊಲ್ಲಲು ಗಡ್ಕರಿ ಆರ್‌ಎಸ್‌ಎಸ್‌ ಜೊತೆ ಸೇರಿ ಯೋಜನೆ ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಮೋದಿ ಕೊಲೆಯನ್ನು ಮುಸ್ಲಿಮರು ಮತ್ತು ಕಮ್ಯುನಿಸ್ಟರ ತಲೆಗೆ ಕಟ್ಟಿ ರಾಜಕೀಯ ಲಾಭ ಮಾಡಿಕೊಳ್ಳಲು ಹುನ್ನಾರ ನಡೆದಿದೆ ಎಂದೂ ಶೆಹ್ಲಾ ಗಂಭೀರ ಆರೋಪ ಮಾಡಿದ್ದಾರೆ.

ಇನ್ನು ಶೆಹ್ಲಾ ರಶೀದ್ ಟ್ವಿಟ್ ಗೆ ಕೆಂಡಾಮಂಡಲವಾಗಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಇಲ್ಲಸಲ್ಲದ ಆರೋಪ ಮಾಡುತ್ತಿರುವ ಶೆಹ್ಲಾ ರಶೀದ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇಂತಹ ಗಂಭೀರ ಆರೋಪ ಮಾಡಿರುವ ಶೆಹ್ಲಾ ವಿರುದ್ದ ಕಾನೂನು ಕ್ರಮಕ್ಕೆ ಚಿಂತನೆ ನಡೆಸಿರುವುದಾಗಿ ಗಡ್ಕರಿ ಟ್ವಿಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಯಿಸಿರುವ ರಶೀದ್, ವಿಶ್ವದ ದೊಡ್ಡ ಪಕ್ಷದ ನಾಯಕರು ವ್ಯಂಗ್ಯಭರಿತ ಮಾತಿನ ಬಗ್ಗೆ ಕಾರ್ಯಪ್ರವೃತ್ತರಾಗುತ್ತಾರೆ. ಆದರೆ, ತಳಬುಡವಿಲ್ಲದ ಮಾಧ್ಯಮ ವರದಿಯಿಂದ ಮುಗ್ಧ ಜೆಎನ್​ಯು ವಿದ್ಯಾರ್ಥಿ ಉಮರ್​ ಖಾಲಿದ್​ ಹಾಗೂ ಆತನ ತಂದೆಯ ಮೇಲೆ ಹಲ್ಲೆಯಾದಾಗ ಧ್ವನಿ ಎತ್ತಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಾಡಾದಿಂದ ಕೊಲ್ಹಾಪುರಿ ಚಪ್ಪಲಿ ಸೇಲ್‌, ಬೆಲೆ ₹83000!
ಸದನದಲ್ಲಿ ಶಾ ಒತ್ತಡದಲ್ಲಿದ್ರು, ಕೈ ಕಂಪಿಸುತ್ತಿತ್ತು : ರಾಹುಲ್‌