
ನವದೆಹಲಿ(ಜ.03):ನೋಟುಗಳ ಅಮಾನ್ಯವು ಪ್ರಸಕ್ತ ವಿತ್ತೀಯ ವರ್ಷದ ಮೂರನೇ ಮತ್ತು ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಆರ್ಥಿಕತೆಯ ಮೇಲೆ ಸ್ವಲ್ಪಮಟ್ಟಿಗೆ ಪರಿಣಾಮ ಬೀರಲಿದೆ. ಆದರೆ, 2017-18ರ ಹಣಕಾಸು ವರ್ಷದಲ್ಲಿ ಈ ನಷ್ಟ ತುಂಬಲು ಸಾಧ್ಯವಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ ಪನಗಾರಿಯಾ ಹೇಳಿದ್ದಾರೆ.
ಸಿಎನ್'ಬಿಸಿ-ಟಿವಿ18 ಜೊತೆ ಮಾತನಾಡಿರುವ ಪನಗಾರಿಯಾ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘‘ಅಮಾನ್ಯ ನೀತಿಯಿಂದಾಗಿ ಆರ್ಥಿಕತೆಯ ಪ್ರಗತಿಯ ದರದಲ್ಲಿ ಕುಂಠಿತವಾಗಬಹುದು. ಆದರೆ, ನಂತರದ ದಿನಗಳಲ್ಲಿ ಆರ್ಥಿಕತೆ ಚೇತರಿಸಿಕೊಳ್ಳಲಿದೆ,’’ ಎಂದಿದ್ದಾರೆ.
ಸರ್ಕಾರವು ನೋಟು ಅಮಾನ್ಯದ ಬಳಿಕ ಸಂಗ್ರಹವಾದ ಹಣದಲ್ಲಿ ಏನಾದರೂ ದೊಡ್ಡ ಉತ್ತೇಜನಾ ಮೊತ್ತ ಘೋಷಿಸಲಿದೆಯೇ ಎಂಬ ಪ್ರಶ್ನೆಗೆ ಪನಗಾರಿಯಾ, ‘‘ಅದನ್ನು ಈಗಲೇ ಊಹಿಸುವುದು ಕಷ್ಟ,’’ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.