ನಿರ್ಭಯಾ ಪ್ರಕರಣದ ಸಾಕ್ಷಿ ಬಗ್ಗೆ ಅಮಿಕಸ್ ಕ್ಯೂರಿ ಗಂಭೀರ ಪ್ರಶ್ನೆ

By Suvarna Web DeskFirst Published Dec 3, 2016, 12:28 PM IST
Highlights

ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಒದಗಿಸಿದ ಸಾಕ್ಷಿಯ ಬಗ್ಗೆ ಅಮಿಕಸ್ ಕ್ಯೂರಿ ಸಂಜಯ್ ಹೆಗ್ಡೆ ಗಂಭೀರ ಪ್ರಶ್ನೆಗಳನ್ನು  ಎತ್ತಿದ್ದಾರೆ.

ನವದೆಹಲಿ (ಡಿ.03): ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಒದಗಿಸಿದ ಸಾಕ್ಷಿಯ ಬಗ್ಗೆ ಅಮಿಕಸ್ ಕ್ಯೂರಿ ಸಂಜಯ್ ಹೆಗ್ಡೆ ಗಂಭೀರ ಪ್ರಶ್ನೆಗಳನ್ನು  ಎತ್ತಿದ್ದಾರೆ.

ಕೈದಿಯಾಗಿರುವ ಮುಕೇಶ್ ಪ್ರಕರಣದ ಪ್ರಮುಖ ಆರೋಪಿಯಾಗಿರಲಿಲ್ಲ. ಜೊತೆಗೆ ಘಟನೆ ನಡೆದಾಗ ಇಬ್ಬರು ಕೈದಿಗಳ ಮೊಬೈಲ್  ಸ್ಥಳಗಳು ಬೇರೆ ಬೇರೆ ಕಡೆ ಪತ್ತೆಯಾಗಿದೆ ಎಂದು ನ್ಯಾಯಾಲಯದ ವಿಶೇಷ ವಿಚಾರಣೆಯಲ್ಲಿ ಸಂಜಯ್ ಹೆಗ್ಡೆ ಹೇಳಿದ್ದಾರೆ.

2012, ಡಿ.16.ರಂದು 23 ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಚಲಿಸುತ್ತಿದ್ದ ಬಸ್ ನಲ್ಲಿ 6 ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಆಕೆಯ ಸ್ನೇಹಿತನೊಡನೆ ಬಸ್ ನಲ್ಲಿ ಪ್ರಯಾಣಿಸುವಾಗ ಆತನ ಕೈಕಾಲು ಕಟ್ಟಿ ಹಾಕಿ ಈಕೆಯ ಮೇಲೆ ಪೈಶಾಚಿಕ ಕೃತ್ಯ ನಡೆಸಿ ಬಸ್ ನಿಂದ ಹೊರ ಎಸೆದಿದ್ದರು. ಈ ಘಟನೆ ದೇಶಾದ್ಯಂತ ಭಾರೀ ಸುದ್ಧಿಯಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಸುಪ್ರೀಂಕೋರ್ಟ್  ನಾಲ್ವರು ಆರೋಪಿಗಳಿಗೆ ಮರಣದಂಡನೆ ನೀಡಿತ್ತು.  

 

click me!