ಬ್ರಿಟನ್ನಲ್ಲಿ ಮಾಸಿಕ 18 ಲಕ್ಷ ರು. ವೇತನದ ಕೆಲಸಕ್ಕಿದ್ದ ನೀಮೋ!

Published : Mar 21, 2019, 08:33 AM IST
ಬ್ರಿಟನ್ನಲ್ಲಿ ಮಾಸಿಕ 18 ಲಕ್ಷ ರು. ವೇತನದ ಕೆಲಸಕ್ಕಿದ್ದ ನೀಮೋ!

ಸಾರಾಂಶ

13 ಸಾವಿರ ಕೋಟಿ ರು. ವಂಚಿಸಿದ್ದ ನೀರವ್ ಮೋದಿ| ಬ್ರಿಟನ್ನಲ್ಲಿ ಮಾಸಿಕ 18 ಲಕ್ಷ ರು. ವೇತನದ ಕೆಲಸಕ್ಕಿದ್ದ ನೀಮೋ!

ಲಂಡನ್‌[ಮಾ.21]: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 13 ಸಾವಿರ ಕೋಟಿ ರು. ವಂಚನೆ ಮಾಡಿದ ಪ್ರಕರಣದಲ್ಲಿ ಬಂಧಿತನಾಗಿರುವ ವಜ್ರೋದ್ಯಮಿ ನೀರವ್‌ ಮೋದಿ ತಾನು, ಬ್ರಿಟನ್‌ನಲ್ಲಿ ಮಾಸಿಕ 20000 ಪೌಂಡ್‌(18 ಲಕ್ಷ ರು.) ವೇತನಕ್ಕೆ ಕೆಲಸ ಮಾಡುತ್ತಿದ್ದೇನೆ ಎಂದು ಬ್ರಿಟನ್‌ ಕೋರ್ಟ್‌ ಬಳಿ ಹೇಳಿಕೊಂಡಿದ್ದಾನೆ.

ಅಲ್ಲದೆ, ಈ ಸಂಬಂಧ ತಾನು ಪಾವತಿ ಮಾಡುತ್ತಿರುವ ತೆರಿಗೆ ಸಾಕ್ಷ್ಯಾಧಾರಕ್ಕಾಗಿ 18 ಲಕ್ಷ ರು.ನ ವೇತನ ರಸೀದಿ ಹಾಗೂ ರಾಷ್ಟ್ರೀಯ ವಿಮೆ ಸಂಖ್ಯೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾನೆ.

ನೀಮೋನ 241ಪೇಂಟಿಂಗ್ಸ್‌, 11 ವಾಹನ ಹರಾಜು: ಇಡಿ

ವಜ್ರೋದ್ಯಮಿ ನೀರವ್‌ ಮೋದಿಗೆ ಸೇರಿದ್ದ 241 ವರ್ಣಚಿತ್ರಗಳು (ಪೇಂಟಿಂಗ್ಸ್‌) ಹಾಗೂ 11 ವಾಹನಗಳನ್ನು ಮಾರಾಟ ಮಾಡಲು ಜಾರಿ ನಿರ್ದೇಶನಾಲಯ ನಿರ್ಧರಿಸಿದೆ. ಈ ಕುರಿತ ಇಡಿ ಸಲ್ಲಿಸಿದ್ದ ಮನವಿಯನ್ನು ಮುಂಬೈನ ವಿಶೇಷ ನ್ಯಾಯಾಲಯ ಮಾನ್ಯ ಮಾಡಿದೆ. ಈ ತಿಂಗಳ ಅಂತ್ಯದಲ್ಲಿ ಇವುಗಳ ಹರಾಜು ನಡೆಸುವ ಸಾಧ್ಯತೆ ಇದೆ. ಈ ಪೇಟಿಂಗ್‌ಗಳ ಮೌಲ್ಯ ಸುಮಾರು 57 ಕೋಟಿ ರು. ಎಂದು ಅಂದಾಜಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
'ನಮ್ಮ ವಯಸ್ಸು ಮೀರುತ್ತಿದೆ, ಬೇಗ ಜಾಬ್ ಕರೆಯಲು ಹೇಳಿ ಸರ್' ಪೊಲೀಸ್ ಕಮಿಷನರ್ ಎದುರು ಗಳಗಳನೇ ಅತ್ತ ಕೊಪ್ಪಳ ಯುವತಿ