
ವಾಷಿಂಗ್ಟನ್ : ಬಾಲಿವುಡ್ ಬ್ಯೂಟಿ ಪ್ರಿಯಾಂಕ ಚೋಪ್ರಾ ಹಾಗೂ ಅಮರಿಕನ್ ಸಿಂಗರ್ ನಿಕ್ ಜೋನಾಸ್ ನಿಶ್ಚಿತಾರ್ಥ ಈಗಾಗಲೆ ನಡೆದಿದ್ದು, ಸದ್ಯ ಎಲ್ಲವೂ ಸುಸೂತ್ರವಾಗಿ ಸಾಗುತ್ತಿದ್ದು ಶೀಘ್ರದಲ್ಲೇ ಈ ಜೋಡಿ ಹಸೆಮಣೆ ಏರಲೂ ಕೂಡ ಸಜ್ಜಾಗಿದೆ.
ಆದರೆ ಇದೀಗ ನಿಕ್ ಜೋನಾಸ್ ಮಾಜಿ ಗೆಳತಿ ಇವರಿಬ್ಬರ ಸಂಬಂಧದ ಬಗ್ಗೆ ತನ್ನ ಮೌನ ಮುರಿದಿದ್ದಾರೆ.
ಮಿಸ್ ಯೂನಿವರ್ಸ್ 2012 ಆಗಿರುವ ಒಲಿವಿಯಾ ಕುಲ್ಪೊ ಇಬ್ಬರ ಬಗ್ಗೆ ಪ್ರೀತಿ ಬಗ್ಗೆ ಮಾತನಾಡಿದ್ದು, ಯಾರೂ ಯಾವುದೇ ಸಂದರ್ಭದಲ್ಲಿ ಪ್ರೀತಿಯನ್ನು ಕಂಡುಕೊಳ್ಳಬಹುದು . ಅದರಲ್ಲೂ ಸಿನಿಮಾ ಜಗತ್ತಿನಲ್ಲಿ. ನಿಕ್ ಇದೀಗ ಹೊಸ ಸಂಬಂಧ ಕಂಡುಕೊಂಡಿದ್ದು ಈ ಬಗ್ಗೆ ತಮಗೆ ಅತ್ಯಂತ ಸಂತೋಷವಿದೆ. ಅವರಿಬ್ಬರ ಜೀವನ ಸಂತೋಷದಿಂದ ಕೂಡಿರಲಿ ಎಂದು ಹೇಳಿದ್ದಾರೆ.
ಅಮೆರಿಕನ್ ಮಾಡೆಲ್ ಹಾಗೂ ಸಿಂಗರ್ ಆಗಿದ್ದ ಒಲಿವಿಯಾ 2012ರಲ್ಲಿ ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾಗಿದ್ದರು. ಇಬ್ಬರ 2 ವರ್ಷಗಳ ಡೇಟಿಂಗ್ ಬಳಿಕ 2015ರಲ್ಲಿ ನಿಕ್ ಜೊತೆ ಒಲಿವಿಯಾ ಸಂಬಂಧ ಮುರಿದು ಬಿದ್ದಿತ್ತು.
ಸದ್ಯ ಒಲಿವಿಯಾ, ಡ್ಯಾನಿ ಅಮೆಂಡೋಲಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.