
ಬೆಂಗಳೂರು : ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಹೊಸದಾದ ವ್ಯವಸ್ಥೆಯೊಂದನ್ನು ಜಾರಿಗೆ ತರಲಾಗುತ್ತಿದೆ. ಇನ್ನು ಮುಂದೆ ಇಲ್ಲಿ ನಿಮ್ಮ ಮುಖವನ್ನೇ ಬೋರ್ಡಿಂಗ್ ಪಾಸ್ ಆಗಿ ಪರಿಗಣಿಸಲಾಗುತ್ತದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಡಳಿತ ಮಂಡಳಿ ಬಯೋಮೆಟ್ರಿಕ್ ಸೆಲ್ಫ್ ಬೋರ್ಡಿಂಗ್ ಟೆಕ್ನಾಲಜಿ ಅಗ್ರಿಮೆಂಟ್ ಗೆ ಸಹಿಯನ್ನು ಹಾಕಿದ್ದಾಗಿ ತಿಳಿಸಿದೆ.
ಮೊದಲ ಬಾರಿಗೆ ದೇಶದಲ್ಲೇ ಇಂತಹ ವ್ಯವಸ್ಥೆಯನ್ನು ಇಲ್ಲಿ ಜಾರಿಗೆ ತರಲಾಗುತ್ತಿದೆ. 2019ರ ಆರಂಭದಲ್ಲಿಯೇ ಈ ನೂತನ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಏರ್ ಏಷಿಯಾ, ಸ್ಪೈಸ್ ಜೆಟ್, ಜೆಟ್ ಏರ್ ವೇಸ್ ಪ್ರಯಾಣಿಕರು ಇದರ ಮೊದಲ ಬಳಕೆದಾರರಾಗಿರಲಿದ್ದಾರೆ.
ಈ ನೂತನ ಟೆಕ್ನಾಲಜಿ ಅಡಿಯಲ್ಲಿ ಮುಖವನ್ನೇ ಬೋರ್ಡಿಂಗ್ ಪಾಸ್ ಆಗಿ ಪರಿಗಣಿಸಲಾಗುತ್ತದೆ. ಇದರಿಂದ ಹೆಚ್ಚಿನ ಸಮಯವು ಉಳಿತಾಯವಾಗಲಿದೆ ಎಂದು ಆಡಳಿತ ಮಂಡಳಿ ಹೇಳಿದೆ.
ಹೆಚ್ಚಿನ ಸಮಯ ನಿಲ್ಲುವುದು, ಪರಿಶೀಲನೆಗೆ ತಡೆಯುವುದು ಸೇರಿದಂತೆ ಯಾವುದೇ ರೀತಿಯ ಹೆಚ್ಚಿನ ಕಾರ್ಯಗಳಿಗೆ ವ್ಯಯವಾಗುವ ಸಮಯವು ಈ ನೂತನ ಟೆಕ್ನಾಲಜಿಯಿಂದ ಉಳಿತಾಯವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.