ಅಮರನಾಥ ಕ್ಷೇತ್ರದಲ್ಲಿ ಜೈಕಾರ, ಘಂಟಾನಾದಕ್ಕೆ ಎನ್’ಜಿಟಿ ನಿಷೇಧ

Published : Dec 14, 2017, 03:40 PM ISTUpdated : Apr 11, 2018, 01:05 PM IST
ಅಮರನಾಥ ಕ್ಷೇತ್ರದಲ್ಲಿ ಜೈಕಾರ, ಘಂಟಾನಾದಕ್ಕೆ ಎನ್’ಜಿಟಿ ನಿಷೇಧ

ಸಾರಾಂಶ

ಅಮರನಾಥ ದೇವಾಲಯದಲ್ಲಿ ಭಕ್ತರು ಮಂತ್ರ ಮತ್ತು ಶಿವನ ಜೈಘೋಷವನ್ನು ಹೇಳುವಂತಿಲ್ಲ ಮತ್ತು ಗಂಟೆ ಭಾರಿಸುವುವಂತಿಲ್ಲ. ದೇವಾಲಯದ ಆಡಳಿತ ಮಂಡಳಿ ಎನ್ಜಿಟಿ ಆದೇಶವನ್ನು ಸ್ಪಷ್ಟವಾಗಿ ಪಾಲಿಸಬೇಕು ಎಂದು ನ್ಯಾ| ಸ್ವತಂತ್ರಕುಮಾರ್ ನೇತೃತ್ವದ ನ್ಯಾಯಾಧಿಕರಣ ಹೇಳಿದೆ.

ನವದೆಹಲಿ (ಡಿ.14): ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿರುವ ಪವಿತ್ರ ಅಮರನಾಥ ಗುಹೆಯ ಪರಿಸರ ಸೂಕ್ಷ್ಮತೆ ಹಾಗೂ ಶಾಂತತೆ ಕಾಪಾಡುವ ಸಲುವಾಗಿ ಹಸಿರು ನ್ಯಾಯಾಧಿಕರಣ (ಎನ್ಜಿಟಿ) ದೇವಾಲಯವನ್ನು`ನಿಶ್ಯಬ್ದ ವಲಯ' ಎಂದು ಘೋಷಿಸಿದ್ದು, ಪ್ರವೇಶ ದ್ವಾರದ ಒಳಗಡೆ ಕೆಲವು ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳುವುದನ್ನು ನಿಷೇಸಿದೆ.

ಅಮರನಾಥ ದೇವಾಲಯದಲ್ಲಿ ಭಕ್ತರು ಮಂತ್ರ ಮತ್ತು ಶಿವನ ಜೈಘೋಷವನ್ನು ಹೇಳುವಂತಿಲ್ಲ ಮತ್ತು ಗಂಟೆ ಭಾರಿಸುವುವಂತಿಲ್ಲ. ದೇವಾಲಯದ ಆಡಳಿತ ಮಂಡಳಿ ಎನ್ಜಿಟಿ ಆದೇಶವನ್ನು ಸ್ಪಷ್ಟವಾಗಿ ಪಾಲಿಸಬೇಕು ಎಂದು ನ್ಯಾ| ಸ್ವತಂತ್ರಕುಮಾರ್ ನೇತೃತ್ವದ ನ್ಯಾಯಾಧಿಕರಣ ಹೇಳಿದೆ.

ಜೊತೆಗೆ ದೇವಾಲಯಕ್ಕೆ ಆಗಮಿಸುವ ಭಕ್ತರು ಮೊಬೈಲ್ ಮತ್ತು ಇತರ ಸಲಕರಣೆಗಳನ್ನು ಕೊನೆಯ ಚಕ್ ಪೋಸ್ಟ್’ನಲ್ಲಿಯೇ ಇಡಬೇಕು. ಇದಕ್ಕಾಗಿ ದೇವಾಲಯ ಆಡಳಿತ ಮಂಡಳಿ ವ್ಯವಸ್ಥೆ ಮಾಡಬೇಕು ಎಂದು ಎನ್ಜಿಟಿ ಮುಖ್ಯಸ್ಥ ನ್ಯಾ. ಸ್ವತಂತ್ರ ಕುಮಾರ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಇದೇ ವೇಳೆ, ಶಿವಲಿಂಗದ ಎದುರಿನ ಕಬ್ಪಿಣದ ಗ್ರಿಲ್’ಗಳನ್ನು ತೆಗೆದುಹಾಕುವಂತೆಯೂ ಎನ್ಜಿಟಿ ಆದೇಶ ಹೊರಡಿಸಿದೆ. ಇದರಿಂದ ಭಕ್ತರು ಅಡೆತಡೆ ಇಲ್ಲದೇ ದೇವರ ದರ್ಶನ ಪಡೆಯಬಹುದಾಗಿದೆ. ಅಮರನಾಥ ದೇವಾಲಯ ಆಡಳಿತ ಮಂಡಳಿ, ಭಕ್ತರಿಗೆ ಸೂಕ್ತವಾದ ಮೂಲ ಸೌಕರ್ಯ ಒದಗಿಸಬೇಕು. ಕೊನೆಯ ಚೆಕ್ ಪೋಸ್ಟ್’ನಿಂದ ದೇವಾಲಯಕ್ಕೆ ಭಕ್ತರು ಒಂದೇ ಸಾಲಿನಲ್ಲಿ ತೆರಳಬೇಕು. ಅಮರನಾಥನ ಸ್ಪಷ್ಟ ದರ್ಶನದಿಂದ ಭಕ್ತರು ವಂಚಿತರಾಗಬಾರದು ಎಂದು ಎನ್ಜಿಟಿ ನಿರ್ದೇಶಿಸಿದೆ.

ಕಳೆದ ತಿಂಗಳು ಎನ್ಜಿಟಿ ವೈಷ್ಟೋ ದೇವಿ ದೇವಾಲಯಕ್ಕೆ ಇದೇ ರೀತಿಯ ಆದೇಶ ಹೊರಡಿಸಿತ್ತು. ಆದರೆ ಭಕ್ತರು ಶಿವನ ಜೈಘೋಷ ಹಾಕಬಾರದು, ಗಂಟೆ ಬಾರಿಸಬಾರದು ಎಂಬ ಆದೇಶಕ್ಕೆ ಕೆಲ ಭಕ್ತ ವಲಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪ ಎತ್ತಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಳಗಾವಿಯಲ್ಲಿ ಕೊನೆ ದಿನ 11 ಗಂಟೆ ಅಧಿವೇಶನ ನಡೆಸಿ ಹೊರಟ್ಟಿ ದಾಖಲೆ
Winter: ಚಳಿಗಾಲದಲ್ಲಿ ಈ ಟ್ರಿಕ್ಸ್‌ನಿಂದ ಮನೆ ಬೆಚ್ಚಗಿಡಿ, ಚಳಿ ನಿಮಿಷದಲ್ಲಿ ಓಡಿಹೋಗುತ್ತೆ