10 ನಿಮಿಷಕ್ಕೊಮ್ಮೆ ಮೊಬೈಲ್ ನೋಡುತ್ತಾರೆ ಭಾರತೀಯರು..!

By Suvarna Web DeskFirst Published Dec 14, 2017, 3:04 PM IST
Highlights

ಭಾರತದ ಶೇ.72ರಷ್ಟು ಮಂದಿ ತಮ್ಮ ಬೇಸರ ನಿವಾರಿಸಿಕೊಳ್ಳುವುದಕ್ಕಾಗಿಯೇ ಸಂದೇಶ, ಕರೆ ಮತ್ತು ಯಾವುದೇ ಸಕಾರಣವಿಲ್ಲದೆಯೇ ತಮ್ಮ ಮೊಬೈಲ್ ನೋಡುತ್ತಾರಂತೆ. ಹೀಗಂತಾ ಸಮೀಕ್ಷೆಯೊಂದು ಹೇಳಿದೆ.

ನವದೆಹಲಿ(ಡಿ.14): ಭಾರತದ ನಾಗರಿಕರು ಬೇಸರ ಕಳೆಯಲು ಏನು ಮಾಡುತ್ತಾರೆ ಎಂದು ಗೊತ್ತಾ? ಅಂತ ಪ್ರಶ್ನಿಸಿದ್ರೆ,ಸ್ನೇಹಿತರ ಜತೆ ಸಮಾಲೋಚನೆ, ತಂದೆ-ತಾಯಿ, ಸಹೋದರ ಸಹೋದರಿಯರ ಜತೆ ಬೆರೆತು, ಬೇಸರ ಕಳೀತಾರೆ ಅಂತ ಅಂದ್ಕೊಂಡಿದ್ರೆ, ಖಂಡಿತಾ ಅದು ತಪ್ಪಾಗಲಿದೆ.

ಭಾರತದ ಶೇ.72ರಷ್ಟು ಮಂದಿ ತಮ್ಮ ಬೇಸರ ನಿವಾರಿಸಿಕೊಳ್ಳುವುದಕ್ಕಾಗಿಯೇ ಸಂದೇಶ, ಕರೆ ಮತ್ತು ಯಾವುದೇ ಸಕಾರಣವಿಲ್ಲದೆಯೇ ತಮ್ಮ ಮೊಬೈಲ್ ನೋಡುತ್ತಾರಂತೆ. ಹೀಗಂತಾ ಸಮೀಕ್ಷೆಯೊಂದು ಹೇಳಿದೆ.

Latest Videos

ಭಾರತ, ಚೀನಾ, ಅಮೆರಿಕ ಮತ್ತು ಬ್ರಿಟನ್’ನಲ್ಲಿ ನಡೆದ ಈ ಸಮೀಕ್ಷೆಯಲ್ಲಿ 10 ಸಾವಿರ ಮಂದಿ ಭಾಗವಹಿಸಿದ್ದರು. ಅಲ್ಲದೆ, ಶೇ.51ರಷ್ಟು ಭಾರತೀಯರು ಹತ್ತು ನಿಮಿಷಕ್ಕೊಮ್ಮೆ ಮೊಬೈಲ್ ಸ್ಕ್ರೀನ್ ಅನ್ನು ನೋಡುತ್ತಾರೆಂದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.

click me!