ಒಂದು ತಿಂಗಳು ಮಂತ್ರಿ ಮಾಲ್ ಬಂದ್!

Published : Feb 02, 2017, 07:11 AM ISTUpdated : Apr 11, 2018, 01:11 PM IST
ಒಂದು ತಿಂಗಳು ಮಂತ್ರಿ ಮಾಲ್ ಬಂದ್!

ಸಾರಾಂಶ

ಸಿಲಿಕಾನ್ ಸಿಟಿ ಬೆಂಗಳೂರಿನ ಮಂತ್ರಿ ಮಾಲ್ ಸದ್ಯಕ್ಕೆ ಓಪನ್ ಆಗಲ್ಲ. ಮಂತ್ರಿ ಮಾಲ್ ಗೋಡೆ ಕುಸಿದ  ಹಿನ್ನೆಲೆಯಲ್ಲಿ ‌ಕಟ್ಟಡ ಅವಶೇಷ ಪರಿಶೀಲನೆ ನಡೆಸಿದ್ದು ದೃಢತೆ ಪತ್ರವನ್ನು ಮತ್ತೊಮ್ಮೆ ಪರಿಶೀಲನೆ ಮಾಡಲಾಗುವುದು ಎಂದು ಬಿಬಿಎಂಪಿ ಹೇಳಿದೆ.

ಬೆಂಗಳೂರು (ಫೆ.02): ಸಿಲಿಕಾನ್ ಸಿಟಿ ಬೆಂಗಳೂರಿನ ಮಂತ್ರಿ ಮಾಲ್ ಸದ್ಯಕ್ಕೆ ಓಪನ್ ಆಗಲ್ಲ. ಮಂತ್ರಿ ಮಾಲ್ ಗೋಡೆ ಕುಸಿದ  ಹಿನ್ನೆಲೆಯಲ್ಲಿ ‌ಕಟ್ಟಡ ಅವಶೇಷ ಪರಿಶೀಲನೆ ನಡೆಸಿದ್ದು ದೃಢತೆ ಪತ್ರವನ್ನು ಮತ್ತೊಮ್ಮೆ ಪರಿಶೀಲನೆ ಮಾಡಲಾಗುವುದು ಎಂದು ಬಿಬಿಎಂಪಿ ಹೇಳಿದೆ.

ಮಂತ್ರಿ ಮಾಲ್ ಗೋಡೆ ಕುಸಿತ ಪ್ರಕರಣ ಹಿನ್ನೆಲೆಯಲ್ಲಿ ತಜ್ಞರ ತಂಡ ಇಂದು ವರದಿ ಸಲ್ಲಿಕೆ ಮಾಡಿತು. ಈ ಸಂಬಂಧ ಕಮೀಷನರ್​ ಮಂಜುನಾಥ್ ಪ್ರಸಾದ್ ಮಾತನಾಡಿ , ಮಾಲ್​ ಕಟ್ಟಡದ ದೃಢತೆಯನ್ನ ಮರು ಪರಿಶೀಲನೆ ನಿರ್ಧಾರವನ್ನ ಹೊರಹಾಕಿದರು.

ಸದ್ಯ ತಜ್ಞರು ನೀಡಿರೊ ವರದಿ ಪ್ರಕಾರ ಕ್ಯಾಂಟೀನ್ ಗೋಡೆಯಲ್ಲಿ ಚಿಲ್ಲರ್ಸ್ ವಾಟರ್​​ ಲೀಕೇಜ್ ಆಗಿದೆ. ಕ್ಯಾಂಟೀನ್ ಗೋಡೆಗೆ ಮೇಲೆ ಲೋಡ್ ಜಾಸ್ತಿಯಾಗಿ ಗೋಡೆ ಕುಸಿತವಾಗಿದೆ ಎಂದು ಗೋಡೆ ಪರಿಶೀಲಿಸಿದ್ದ ತಜ್ಞರ ತಂಡ ಮಾಲ್​ ದೋಷವನ್ನ ಬಿಚ್ಚಿಟ್ಟರು. ಈ ಪ್ರಕಾರ ಸದ್ಯ ಮಂತ್ರಿ ಮಾಲ್ ಮತ್ತೆ ಅಕ್ಯೂಪಿಕೇಷನ್​ ಪ್ರಮಾಣಪತ್ರ ಪಡೆಯಬೇಕಾದ್ರೆ ಮಾಲ್​ನ 1.22 ಲಕ್ಷ ಚದರು ಮೀಟರ್​ ಗುಣಮಟ್ಟದ ಬಗ್ಗೆ ದೃಢೀಕರಣ ಮಾಡಬೇಕೆಂದು ಸ್ಪಷ್ಟಪಡಿಸಿದರು..

ಮಂಜುನಾಥ್ ಪ್ರಸಾದ್ ಹೇಳಿದ್ದೇನು?

ಸದ್ಯ ಪಾಲಿಕೆ ತಜ್ಞರ ತಂಡ 47 ಪುಟಗಳ ವರದಿಯನ್ನ ಸಲ್ಲಿಕೆ ಮಾಡಿದೆ. ಈ ವರದಿಯಲ್ಲಿ ನೀಡಿರೊ ಶಿಫಾರಸ್ಸಿನಂತೆ ಗೋಡೆ ಕುಸಿತದ ಭಾಗವನ್ನ ಮತ್ತೊಮ್ಮೆ ಸದೃಢಗೊಳಿಸಬೇಕಿದೆ. ಜತೆಗೆ ಇಡೀ ಕಟ್ಟಡ ದೃಡತೆ ಬಗ್ಗೆ ವರದಿ ಬೇಕಾಗಿದೆ. ಆದರೆ ಈ ಬಾರಿ ಖುದ್ದು ಮಂತ್ರಿಮಾಲ್​ ಕಟ್ಟಡ ಬಗ್ಗೆ ಪರೀಕ್ಷೆ ಮಾಡಿಸಲಿದೆ. ಈ ವರದಿಯನ್ನ ಪಡೆದ ನಂತರ ಪಾಲಿಕೆ ಅಧಿಕಾರಿಗಳು , ತಜ್ಞರು ಮರು ಪರಿಶೀಲನೆಯನ್ನ ಮಾಡಲಿದ್ದಾರೆ. ಸದ್ಯಕ್ಕಂತೂ ಬಿಬಿಎಂಪಿ ತೇಪೆ ಹಾಕುವ ವರದಿ ನೀಡಿದೆ.  ಈ ವರದಿ ಪ್ರತಿಯನ್ನ ಸರ್ಕಾರಕ್ಕೆ ನೀಡಿದ ನಂತರವಷ್ಟೇ ಸಾರ್ವಜನಿಕರಿಗೆ ವೆಬ್​ ಸೈಟ್ ಮೂಲಕ ಹಾಕಲಾಗುತ್ತದೆ ಎಂದು ಕಮೀಷನರ್​ ಹೇಳಿದ್ದಾರೆ. ಈ ಪ್ರಕಾರ ಮುಂದಿನ ಒಂದು ತಿಂಗಳು ಮಂತ್ರಿ ಮಾಲ್ ತೆರೆಯೊದು ಅನುಮಾಣ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ