5 ಮುಸ್ಲಿಮ್ ದೇಶಗಳ ಪ್ರಜೆಗಳ ಪ್ರವೇಶಕ್ಕೆ ನಿಷೇಧ ಹೇರಿದ ಕುವೈಟ್

By Suvarna Web DeskFirst Published Feb 2, 2017, 6:17 AM IST
Highlights

ಪಾಕಿಸ್ತಾನ, ಅಫಘಾನಿಸ್ತಾನ, ಸಿರಿಯಾ, ಇರಾಕ್ ಹಾಗೂ ಇರಾನ್ ದೇಶಗಳ ಪ್ರಜೆಗಳಿಗೆ ಕುವೈಟ್ ಪ್ರವೇಶಿಸದಂತೆ ಒಟ್ಟು ನಿರ್ಬಂಧ ಹೇರಲಾಗಿದ್ದು, ಇನ್ಮುಂದೆ ವೀಸಾಕ್ಕಾಗಿ ಅರ್ಜಿ ಸಲ್ಲಿಸಬಾರದು ಎಂದು ಸ್ಪಟ್ನಿಕ್ ನ್ಯೂಸ್ ವರದಿ ಮಾಡಿದೆ.

ಮಾಸ್ಕೋ, ರಷ್ಯಾ (ಫೆ.02): ಅಮೆರಿಕಾವು 7 ಮುಸ್ಲಿಮ್ ದೇಶಗಳ ಪ್ರಜೆಗಳಿಗೆ ಪ್ರವೆಶವನ್ನು ನಿರ್ಬಂಧಿಸಿರುವ ಬೆನ್ನಲ್ಲೇ, ಮುಸ್ಲಿಮ್ ದೇಶವಾದ ಕುವೈಟ್ ಕೂಡಾ ಪಾಕಿಸ್ತಾನ ಸೇರಿದಂತೆ 5 ಮುಸ್ಲಿಮ್ ದೇಶಗಳ ಪ್ರಜೆಗಳಿಗೆ ಪ್ರವೇಶವನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ.

ಪಾಕಿಸ್ತಾನ, ಅಫಘಾನಿಸ್ತಾನ, ಸಿರಿಯಾ, ಇರಾಕ್ ಹಾಗೂ ಇರಾನ್ ದೇಶಗಳ ಪ್ರಜೆಗಳಿಗೆ ಕುವೈಟ್ ಪ್ರವೇಶಿಸದಂತೆ ಒಟ್ಟು ನಿರ್ಬಂಧ ಹೇರಲಾಗಿದ್ದು, ಇನ್ಮುಂದೆ ವೀಸಾಕ್ಕಾಗಿ ಅರ್ಜಿ ಸಲ್ಲಿಸಬಾರದು ಎಂದು ಸ್ಪಟ್ನಿಕ್ ನ್ಯೂಸ್ ವರದಿ ಮಾಡಿದೆ.

ಉಗ್ರವಾದಿಗಳು ತನ್ನ ದೇಶದೊಳಗೆ ಪ್ರವೇಶಿಸುವುದನ್ನು ತಡೆಯಲು ಈ ಕ್ರಮಗಳನ್ನು ಕುವೈಟ್ ಕೈಗೊಂಡಿದೆ ಎನ್ನಲಾಗಿದೆ.

ಸಿರಿಯನ್ ಪ್ರಜೆಗಳಿಗೆ ಅಮೆರಿಕಾ ನಿಷೇಧ ಹೇರುವುದಕ್ಕಿಂತ ಬಹಳ ಹಿಂದೆ ಕುವೈಟ್ 2011ರಲ್ಲೇ ಪ್ರವೇಶವನ್ನು ನಿರ್ಬಂಧಿಸಿತ್ತು.

2015ರಲ್ಲಿ ಇಲ್ಲಿನ ಶಿಯಾ ಮಸೀದಿಯೊಂದರಲ್ಲಿ ನಡೆದ ಭಯೋತ್ಪಾದನಾ ಕೃತ್ಯದಲ್ಲಿ 27 ಮಂದಿ ಕುವೈಟ್ ಪ್ರಜೆಗಳು ಸಾವನಪ್ಪಿದ್ದರು.

click me!