ಸಣ್ ಸಣ್ ಸುದ್ದಿಗಳು

By Suvarna Web DeskFirst Published Apr 20, 2017, 1:07 PM IST
Highlights

ಕ್ಷಣ ಕ್ಷಣದ ಸಣ್ಣ ಸಣ್ಣ ಸುದ್ದಿಗಳು

ಹಣ ಪಾವತಿಸಿ ಅಥವಾ ತಿಹಾರ್’ಗೆ ಹೋಗಲು ಸಿದ್ಧರಾಗಿ:

ಸಹಾರಾ ಸಂಸ್ಥೆ ಮಾಲೀಕ ಸುಬ್ರತೋ ರಾಯ್’ಗೆ ಜೂ.19ರೊಳಗೆ ಹಣ ಪಾವತಿಸುವಂತೆ ಹೇಳಿರುವ ಸುಪ್ರೀಂ ಕೋರ್ಟ್, ತಪ್ಪಿದ್ದಲ್ಲಿ ತಿಹಾರ್ ಜೈಲಿಗೆ ಹೋಗಲು ಸಿದ್ಧರಾಗಿ ಎಂದು ಕಠಿಣ ಎಚ್ಚರಿಕೆ ನೀಡಿದೆ.  ಈಗಾಗಲೇ ಸಹಾರಾ ಸಂಸ್ಥೆಯು ರೂ.1500 ಕೋಟಿ, ರೂ.500 ಕೋಟಿ ಹಾಗೂ ರೂ.3000 ಕೋಟಿಗಳ ಚೆಕ್ಕನ್ನು ಸಲ್ಲಿಸಿದೆ.

ದೇಶದ್ರೋಹ ಪ್ರಕರಣ: 31 ವಿದ್ಯಾರ್ಥಿಗಳಿಗೆ ತನಿಖೆಗೆ ಹಾಜರಾಗುವಂತೆ ಸೂಚನೆ

ಜೆಎನ್’ಯು ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಯ ಮೂಮದೆ ಹಾಜರಾಗಲು 31 ವಿದ್ಯಾರ್ಥಿಗಳಿಗೆ ಪೊಲೀಸರು ಸೂಚಿಸಿದ್ದಾರೆ.  ಏ.27ರಿಂದ 29ರವರೆಗೆ ವಿವಿಯ ಆಡಳಿತಾತ್ಮಕ ಬ್ಲಾಕ್’ನಲ್ಲಿ ವಿಚಾರಣೆ ನಡೆಯಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಹಾಗೂ ಉಮರ್ ಖಾಲಿದ್’ಗೆ ಈಗಾಗಲೇ ಜಾಮೀನು ದೊರಕಿದೆ.  

ಆಪ್ ಸೋಲಿಗೆ ಅಧಿಕಾರದಾಹವೇ ಕಾರಣ:

ಎಂಸಿಡಿ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷಕ್ಕಾಗಿರುವ ಹೀನಾಯ ಸೋಲಿನ ಬಗ್ಗೆ ಪ್ರತಿಕ್ರಿಯಿಸಿರುವ ಅಣ್ಣಾ ಹಜಾರೆ, ಆಪ್ ಪಕ್ಷಕ್ಕಿರುವ ಅಧಿಕಾರದಾಹವೇ ಅದರ ಸೋಲಿಗೆ ಕಾರಣವೆಂದು ಹೇಳಿದ್ದಾರೆ.

ದೆಹಲಿಯನ್ನು ಮಾದರಿ ರಾಜ್ಯವನ್ನಾಗಿ ಅಭಿವೃದ್ಧಿಪಡಿಸಲು ಜನರು ಅವರಿಗೆ ಅಧಿಕಾರ ನೀಡಿದ್ದರು. ಆದರೆ ಅಧಿಕಾರವೆಂಬುವುದು ಕೆಟ್ಟದು, ಒಮ್ಮೆ ಅಧಿಕಾರಕ್ಕೆ ಬಂದ ಬಳಿಕ ಅದು ಯೋಚನಾ ಸಾಮರ್ಥ್ಯವನ್ನೇ ಕೆಡಿಸುತ್ತದೆ. ದೆಹಲಿಯಲ್ಲಿ ಕೆಲಸ ಮಾಡುವ ಅವರು ಪಂಜಾಬ್, ಗೋವಾದಲ್ಲಿ ಅಧಿಕಾರ ಪಡೆಯಲು ತರಾತುರಿಪಡುವ ಅಗತ್ಯವಿರಲಿಲ್ಲವೆಂದು ಹಜಾರೆ ಹೇಳಿದ್ದಾರೆ.

ನೇಮಕ:

ಸಿಆರ್'ಪಿಎಫ್'ನ ನೂತನ ಮಹಾನಿರ್ದೇಶಕರಾಗಿ ರಾಜೀವ್ ರೈ ಭಟ್ನಾಕರ್ ಅವರನ್ನು ನೇಮಿಸಲಾಗಿದೆ. 1983ರ ಕೇಡರ್'ನ ಐಪಿಎಸ್ ಅಧಿಕಾರಿಯಾಗಿರುವ ಭಟ್ನಾಗರ್, ಮಾದಕವಸ್ತು ತಡೆ ಬ್ಯೂರೋವಿನ ಡಿ.ಜಿ.ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ರಾಜಿನಾಮೆ:

ಎಂಸಿಡಿ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ದೆಹಲಿ ಸಂಚಾಲಕ ಹುದ್ದೆಗೆ ದಿಲೀಪ್ ಪಾಂಡೆ ರಾಜಿನಾಮೆ ನೀಡಿದ್ದಾರೆ.

ನಿಷೇಧ:

ಫೇಸ್'ಬುಕ್, ಟ್ವಿಟರ್ ಹಾಗೂ ವಾಟ್ಸಪ್ ಸೇರಿದಂತೆ 22 ಸೋಶಿಯಲ್ ನೆಟ್ವರ್ಕಿಂಗ್ ಜಾಲತಾಣಗಳಿಗೆ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಒಂದು ತಿಂಗಳುಗಳ ಮಟ್ಟಿಗೆ ನಿಷೇಧ ಹೇರಿದೆ. ಕಣಿವೆಯಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ನಿಯಂತ್ರಿಸಲು ಈ ಕ್ರಮ ಕೈ ಗೊಳ್ಳಲಾಗಿದೆ.

ಕೃಷಿ ತೆರಿಗೆ ಇಲ್ಲ:

ನೀತಿ ಆಯೋಗದ ಸದಸ್ಯ ವಿವೇಕ್ ದೇವ್’ರಾಯ್ ನೀಡಿರುವ ಸಲಹೆಯನ್ನು ತಿರಸ್ಕರಿಸಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಕೃಷಿ ಆದಾಯಕ್ಕೆ ತೆರಿಗೆ ವಿಧಿಸುವ ಯಾವುದೇ ಇರಾದೆ ಕೇಂದ್ರ ಸರ್ಕಾರಕಕ್ಕಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

click me!