ನಿಮಗೆ ಜವಾಬ್ದಾರಿಯಿಲ್ಲ; ರವಿಶಂಕರ್ ಗುರೂಜಿ ಮೇಲೆ ಕೋರ್ಟ್ ಕೆಂಡಾಮಂಡಲ

By Suvarna Web DeskFirst Published Apr 20, 2017, 12:49 PM IST
Highlights

ಯಮುನಾ ನದಿ ತಟದಲ್ಲಿ ಕಳೆದ ವರ್ಷ 3 ದಿನಗಳ ಸಾಂಸ್ಕೃತಿಕ ಹಬ್ಬವನ್ನು ಆಯೋಜಿಸಿ ಪರಿಸರವನ್ನು ಕಲುಷಿತಗೊಳಿಸಲಾಗಿದೆ ಎಂದು ಹಸಿರು ನ್ಯಾಯಾಧೀಕರಣವು ಶ್ರೀಶ್ರೀ ರವಿಶಂಕರ್ ಗುರೂಜಿಯನ್ನು ತರಾಟೆಗೆ ತೆಗೆದುಕೊಂಡಿರುವುದಾಗಿ ಎನ್'ಡಿಟಿವಿ ವರದಿ ಮಾಡಿದೆ.

ನವದೆಹಲಿ (ಏ.20): ಯಮುನಾ ನದಿ ತಟದಲ್ಲಿ ಕಳೆದ ವರ್ಷ 3 ದಿನಗಳ ಸಾಂಸ್ಕೃತಿಕ ಹಬ್ಬವನ್ನು ಆಯೋಜಿಸಿ ಪರಿಸರವನ್ನು ಕಲುಷಿತಗೊಳಿಸಲಾಗಿದೆ ಎಂದು ಹಸಿರು ನ್ಯಾಯಾಧೀಕರಣವು ಶ್ರೀಶ್ರೀ ರವಿಶಂಕರ್ ಗುರೂಜಿಯನ್ನು ತರಾಟೆಗೆ ತೆಗೆದುಕೊಂಡಿರುವುದಾಗಿ ಎನ್'ಡಿಟಿವಿ ವರದಿ ಮಾಡಿದೆ.

ದೆಹಲಿಯಲ್ಲಿ ಕಳೆದ ವರ್ಷ ಯಮುನಾ ನದಿ ತಟದಲ್ಲಿ ಆಯೋಜಿಸಿದ್ದ 3 ದಿನಗಳ ಜಾಗತಿಕ ಸಾಂಸ್ಕೃತಿಕ ಉತ್ಸವದಿಂದ ಪರಿಸರ ಹಾಳಾಗಿದ್ದರೆ ಅದಕ್ಕೆ ಸರ್ಕಾರ ಮತ್ತು ಕೋರ್ಟ್ ಹೊಣೆ ಯಾಕೆಂದರೆ ಅವರೇ ನಮಗೆ ಅವಕಾಶ ನೀಡಿದ್ದು. ಹೀಗಾಗಿ ಅವರನ್ನು ಪ್ರಶ್ನಿಸಿ ಎಂದು ರವಿಶಂಕರ್ ಗುರೂಜಿ ನಿನ್ನೆ ಹೇಳಿದ್ದರು. ಇದಕ್ಕೆ ಕೋಪೋದ್ರಿಕ್ತವಾದ ಕೋರ್ಟ್, ನಿಮಗೆ ಜವಾಬ್ದಾರಿಯಿಲ್ಲ. ನಿಮಗೆ ಬೇಕೆನಿಸಿದ್ದನ್ನು ಹೇಳುವ ಸ್ವಾತಂತ್ರ್ಯ ನಿಮಗಿದೆ ಎಂದು ಭಾವಿಸಿದ್ದೀರಾ? ಎಂದು ಕೋರ್ಟ್ ಶ್ರೀಶ್ರೀಗಳಿಗೆ ಕೇಳಿದೆ.

ಒಂದುವೇಳೆ ದಂಡವನ್ನು ವಿಧಿಸುವುದಾದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮತ್ತು ಎನ್ ಜಿಟಿ ಮೇಲೆ ವಿಧಿಸಬೇಕು. ಯಾಕೆಂದರೆ ಅವರು ನಮಗೆ ಅನುಮತಿ ನೀಡಿದ್ದು. ಒಂದು ವೇಳೆ ಯಮುನಾ ನದಿ ತೀರ ಕಲುಷಿತಗೊಂಡಿದ್ದರೆ ಅವರು ಅವಕಾಶ ನೀಡಬಾರದಿತ್ತು ಎಂದು ಗುರೂಜಿ ಹೇಳಿದ್ದಾರೆ.

ಮುಂದಿನ ವಿಚಾರಣೆ ಮೇ 7 ರಂದು ನಡೆಯಲಿದೆ.

 

click me!