
ಬೆಂಗಳೂರು, [ನ.22]: ಮುಸ್ಲಿಂ ಯುವಕನೊಂದಿಗೆ ಮದುವೆಯಾಗಿದ್ದ ನವ ವಿವಾಹಿತೆಯೊಬ್ಬಳು ನೇಣಿಗೆ ಶರಣಾದ ಘಟನೆ ನಿನ್ನೆ [ಬುಧವಾರ] ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಡೆದಿದೆ.
ರೋಜ ನೇಣಿಗೆ ಶರಣಾದ ವಿವಾಹಿತೆ. ಈಕೆ ಮೂಲತಃ ಬಾಗೇಪಲ್ಲಿಯವಳು. ತಂದೆ ಇಲ್ಲದ ಮಗಳೆಂದು ಪ್ರೀತಿಯಿಂದ ಸಾಕಿದ ತಾಯಿ, ಕೂಲಿ ಮಾಡಿ ಮಗಳಿಗೆ ವಿದ್ಯಾಭ್ಯಾಸ ಕೊಡಿಸಿದ್ರು. ಅದರಂತೆ ಯುವತಿ ಪಿಯೂಸಿ ಮುಗಿಸಿ ಡಿಗ್ರಿ ಓದುತ್ತಿರುವಾಗ ಬಾಬಾಜಾನ್ ಎಂಬಾತನ ಪರಿಚಯವಾಗಿದ್ದು, ಬಳಿಕ ಅದು ಪ್ರೀತಿಗೆ ತಿರುಗಿತ್ತು.
ಈ ವಿಷಯ ರೋಜ ಮನೆಯವರಿಗೆ ತಿಳಿದಿದ್ದು, ಯುವಕ ಮುಸ್ಲಿಂ ಆದ ಕಾರಣ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಡುವೆಯೂ ಕಳೆದ ನಾಲ್ಕು ತಿಂಗಳ ಹಿಂದೆ ಬಾಬಾಜಾನ್ ಎಂಬಾತನ ಜೊತೆ ಮನೆತೊರೆದ ಯುವತಿ ನಗರದ ಕೊಡಿಗೇಹಳ್ಳಿ ಠಾಣಾ ವ್ಯಾಪ್ತಿಯ ಬ್ಯಾಟರಾಯನಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು
ಆದರೆ, ಅದೇನಾಗಿತ್ತೋ ಏನೋ ಯುವಕನ ನಂಬಿ ಬಂದ ಯುವತಿ ನಿನ್ನೆ [ಬುಧವಾರ] ಸಾವನ್ನಪ್ಪಿದ್ದಾಳೆ. ಬಾಬಾಜಾನ್ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದನು.
ಬಾಬಾ ಜಾನ್ ರೋಜಳನ್ನ ಬಲವಂತವಾಗಿ ಬ್ಲಾಕ್‍ಮೇಲ್ ಮಾಡಿ ಕರೆದುಕೊಂಡು ಬಂದಿದ್ದಾನೆ. ಇದು ಆತ್ಮಹತ್ಯೆ ಅಲ್ಲ. ಆಕೆ ಚೆನ್ನಾಗಿ ಓದುವ ಆಸೆ ಕಂಡಿದ್ದಳು. ಆದ್ರೆ ಅದ್ಯಾವುದಕ್ಕೂ ಆಸ್ಪದ ನೀಡದ ಆತ ಮಗಳಿಗೆ ಕಿರುಕುಳ ನೀಡಿ ಕೊಲೆ ಮಾಡಿದ್ದಾನೆಂದು ರೋಜ ಪೋಷಕರು ಆರೋಪಿಸಿದ್ದಾರೆ.
ಸದ್ಯ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಬಾಜಾನ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ