
ನವದೆಹಲಿ: ಇತ್ತೀಚೆಗಷ್ಟೇ ಇಲ್ಲಿನ ಬುರಾರಿಯಲ್ಲಿ ನೇಣು ಬಿಗಿದುಕೊಂಡು ಒಂದೇ ಕುಟುಂಬದ 11 ಸದಸ್ಯರ ಆತ್ಮಹತ್ಯೆ ಪ್ರಕರಣ ಸಂಬಂಧ ಮತ್ತಷ್ಟು ದಾಖಲೆಗಳು ಹೊರಬಿದ್ದಿವೆ.
ಮುಂದಿನ ನವೆಂಬರ್‌ನಲ್ಲಿ ಮದುವೆಗೆ ಸಿದ್ಧಗೊಂಡಿದ್ದ ಪ್ರಿಯಾಂಕಾ ಕುಜ ದೋಷಕ್ಕೆ ತುತ್ತಾಗಿರುವುದು ಕುಟುಂಬ ಸದಸ್ಯರನ್ನು ಆತಂಕಕ್ಕೆ ಈಡು ಮಾಡಿತ್ತು ಎಂಬ ವಿಷಯ ದಾಖಲೆಗಳಿಂದ ಬಹಿರಂಗವಾಗಿದೆ.
ಆತ್ಮಹತ್ಯೆಗೆ ಶರಣಾದವರ ಪೈಕಿ ನಾರಾಯಣ್ ದೇವಿ(75)ಯ ಮೊಮ್ಮಗಳಾದ ಪ್ರಿಯಾಂಕಾ(33)ಳ ಜಾತಕದಲ್ಲಿ ಕುಜ ದೋಷ ಇತ್ತು. ಆಕೆಗೆ ಮುಂದಿನ ನವೆಂಬರ್‌ನಲ್ಲಿ ಮದುವೆ ನಿಶ್ಚಯವಾಗಿತ್ತು.
ಹೀಗಾಗಿ ಮುಂದೇನು ಎಂಬುದರ ಬಗ್ಗೆ ಕುಟುಂಬ ಸದಸ್ಯರು ಬೇಸತ್ತಿರುವ ಸಂಗತಿ ದಾಖಲೆಗಳಲ್ಲಿ ಕಂಡುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.