
ಬೆಂಗಳೂರು (ಡಿ. 28): ಆದಾಯ ತೆರಿಗೆ ಇಲಾಖೆ ಅಘೋಷಿತ ಆದಾಯ ಘೋಷಿಸಿಕೊಳ್ಳುವವರಿಗೆ ನೂತನ ಯೋಜನೆ ತರಲಾಗಿದೆ.
ಆದಾಯ ಘೋಷಿಸಿಕೊಳ್ಳುವವರು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಲ್ಲಿ ಕಡ್ಡಾಯವಾಗಿ ಡಿಪಾಸಿಟ್ ಮಾಡಬೇಕು. ಅಘೋಷಿತ ಆದಾಯದಲ್ಲಿ 49.9% ದಂಡ ವಿಧಿಸಲಾಗುತ್ತದೆ. 59 ಪರ್ಸೆಂಟ್ ನಲ್ಲಿ 25% ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಲ್ಲಿ ಹೂಡಕೆ ಮಾಡಬೇಕು. ನಾಲ್ಕು ವರ್ಷದ ಅವಧಿಗೆ ಹೂಡಿಕೆ ಮಾಡುವುದು ಕಡ್ಡಾಯ. ಮಾರ್ಚ್ 31 ರ ವರೆಗೆ ಅಘೋಷಿತ ಆದಾಯ ಘೋಷಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಆಸ್ತಿಯನ್ನು ಚರ, ಸ್ಥಿರ, ನಗದು, ಆಭರಣ ಯಾವುದೇ ರೂಪದಲ್ಲಿದ್ದರೂ ಘೋಷಿಸಿಕೊಳ್ಳಬಹುದು. ಮುಂದಿನ ಆರ್ಥಿಕ ವರ್ಷ ಆರಂಭವಾಗುವುದರ ಒಳಗೆ ನಿಶ್ಚಿತ ಠೇವಣಿ ಮಾಡಬೇಕು ಎಂದು ಆದಾಯ ತೆರಿಗೆ ಮುಖ್ಯ ಆಯುಕ್ತೆ ನೂತನ್ ಒಡೆಯರ್ ಹೇಳಿದ್ದಾರೆ.
ಕಡ್ಡಾಯವಾಗಿ ಗರೀಬ್ ಕಲ್ಯಾಣ ಯೋಜನೆಯಲ್ಲಿ ನಿಶ್ಚಿತ ಠೇವಣಿ ಇಡಬೇಕು. ಅಘೋಷಿತ ಆದಾಯವನ್ನು ಘೋಷಿಸಿಕೊಳ್ಳದಿದ್ದರೆ 107% ದಂಡ ವಿಧಿಸಲಾಗುವುದು. ಕ್ರಿಮಿನಲ್ ಮೊಕದ್ದಮೆ ದಾಖಲಿಸಿ 7 ವರ್ಷದವರೆಗೆ ಶಿಕ್ಷೆ ವಿಧಿಸಲಾಗುತ್ತದೆ. ಡಿ.17ರಿಂದ ಈ ಯೋಜನೆ ಆರಂಭವಾಗಿದೆ. ಆದಾಯ ಘೋಷಿಸಿಕೊಳ್ಳಲು ಇದು ಉತ್ತಮ ಅವಕಾಶ. ಹಳೆಯ ನೋಟಗಳನ್ನೂ ಕೂಡ ಡಿಪಾಸಿಟ್ ಮಾಡಬಹುದು ಆದಾಯ ತೆರಿಗೆ ಮುಖ್ಯ ಆಯುಕ್ತೆ ನೂತನ್ ಒಡೆಯರ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.