ಮಹಿಳೆಯೋರ್ವಳ ಜನ್ ಧನ್ ಖಾತೆಗೆ ಜಮಾ ಆಯ್ತು 100 ಕೋಟಿ ಹಣ

By Suvarna Web DeskFirst Published Dec 28, 2016, 12:37 PM IST
Highlights

ಮಹಿಳೆಯೋರ್ವಳು ತಮ್ಮ ಜನ್‌‌ಧನ್ ಖಾತೆಯಲ್ಲಿ ತಮ್ಮದಲ್ಲದ 100 ಕೋಟಿ ರೂ. ಹಣ ಜಮಾ ಆಗಿರುವುದನ್ನು ಅರಿತು ಅಚ್ಚರಿಗೊಳಗಾದ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶ (ಡಿ. 28): ಮಹಿಳೆಯೋರ್ವಳು ತಮ್ಮ ಜನ್‌‌ಧನ್ ಖಾತೆಯಲ್ಲಿ ತಮ್ಮದಲ್ಲದ 100 ಕೋಟಿ ರೂ. ಹಣ ಜಮಾ ಆಗಿರುವುದನ್ನು ಅರಿತು ಅಚ್ಚರಿಗೊಳಗಾದ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಬೆಳಕಿಗೆ ಬಂದಿದೆ.

ಶೀತಲ್ ಯಾದವ್ ಎಂಬುವವರ ಜನ್‌‌ಧನ್ ಖಾತೆಗೆ 100 ಕೋಟಿ ರೂ. ಬಂದಿದೆ. ಮೀರತ್‌ನಲ್ಲಿರುವ ಸ್ಟೇಟ್ ಬ್ಯಾಂಕ್‌ ಆಫ್ ಇಂಡಿಯಾ ಬ್ರ್ಯಾಂಚ್‌ವೊಂದರಲ್ಲಿ ಶೀತಲ್ ಖಾತೆ ಹೊಂದಿದ್ದು, ಈ ಖಾತೆಗೆ ಹಣ ಬಂದಿದೆ. ಈ ಕುರಿತು ಬ್ಯಾಂಕ್ ಅಧಿಕಾರಿಗಳನ್ನು ಮಹಿಳೆ ಸಂಪರ್ಕಿಸಿದ್ದಾಳೆ. ಆದರೆ ಅಧಿಕಾರಿಗಳು ದೂರು ಸ್ವೀಕರಿಸದ ಹಿನ್ನೆಲೆಯಲ್ಲಿ ಶೀತಲ್ ಪ್ರಧಾನಿ ಕಾರ್ಯಾಲಯವನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾಳೆ.

ತನ್ನ ಪತಿ ಜಿಲೆಂದರ್ ಸಿಂಗ್ ಮೂಲಕ ಪಿಎಂಒಗೆ ಮೇಲ್ ಮಾಡಿಸಿರುವ ಶೀತಲ್ ಯಾದವ್, ಪ್ರಕರಣ ಕುರಿತು ಮಾಹಿತಿ ನೀಡಿದ್ದಾಳೆ. ಡಿ. 18 ರಂದು ಐಸಿಐಸಿಐ ಎಟಿಎಂಗೆ ಹಣ ಪಡೆಯಲು ಹೋದ ವೇಳೆ ಖಾತೆಯಲ್ಲಿ 99,99,99,394 ರೂ. ಇರುವುದು ಗೊತ್ತಾಗಿದೆ. ಇದನ್ನು ನೋಡಿ ಅಚ್ಚರಿಗೊಂಡ ಮಹಿಳೆ ಇನ್ನೊಂದು ಎಟಿಎಂಗೆ ಹೋಗಿ ಚೆಕ್ ಮಾಡಿದಾಗಲೂ ಅಷ್ಟೇ ಹಣ ತೋರಿಸಿದೆ. ಬಳಿಕ ಶೀತಲ್ ಬ್ಯಾಂಕ್‌ಗೆ ತೆರಳಿ ಮಾಹಿತಿ ನೀಡಿದ್ದಳು. ಆದರೆ ಅವರು ಮಹಿಳೆಯನ್ನು ನಿರ್ಲಕ್ಷಿಸಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆ ಪಿಎಂಒ ಕಚೇರಿ ಸಂಪರ್ಕಿಸಿ ಡಿ. 26 ರಂದು ಮಾಹಿತಿ ನೀಡಿದ್ದಾಳೆ.

ಈ ಕುರಿತು ಬ್ಯಾಂಕ್‌ನ ಯಾವುದೇ ಅಧಿಕಾರಿಗಳು ಪ್ರತಿಕ್ರಿಯೆ ನೀಡಿಲ್ಲ. ಜನ್‌ಧನ್ ಖಾತೆಯಲ್ಲಿ 50 ಸಾವಿರ ರೂ.ವರೆಗೆ ಮಾತ್ರ ಹಣ ಇರಬೇಕು. ಆದ್ರೆ ಆ ಮಿತಿಯನ್ನು ಈ ಖಾತೆ ದಾಟಿದೆ ಎಂದು ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಶೀತಲ್ ಪತಿ ತಿಳಿಸಿದ್ದಾರೆ.

click me!