
ನವದೆಹಲಿ(ಅ.27): 32 ಲಕ್ಷಕ್ಕೂ ಅಧಿಕ ಡೆಬಿಟ್ ಕಾರ್ಡ್‌ಗಳ ಹ್ಯಾಂಕ್ ಮಾಡಲಾಗಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದ ನಂತರ ಎಚ್ಚೆತ್ತ ಆರ್‌ಬಿಐ, ಹೊಸ ಯೋಜನೆ ಜಾರಿಗೆ ಮುಂದಾಗಿದೆ. ಗ್ರಾಹಕರ ಹಣಕ್ಕೆ ಸುರಕ್ಷೆ ಕಲ್ಪಿಸುವ ನಿಟ್ಟಿನಲ್ಲಿ ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳ ವ್ಯವಹಾರದ ವೇಳೆ ಗುರುತಿನ ದೃಢೀಕರಣಕ್ಕಾಗಿ ಕಣ್ಣು ಅಥವಾ ಬೆರಳನ್ನೇ ಬಳಸುವ ಸೌಲಭ್ಯ ಜಾರಿಗೆ ಬರಲಿದೆ.
ಮುಂದಿನ ವರ್ಷದ ಜನವರಿ 1ರಿಂದಲೇ ಈ ಯೋಜನೆ ಜಾರಿಗೆ ಬರುವ ನಿರೀಕ್ಷೆ ಇದೆ. ಹೊಸ ಎಟಿಎಂಗಳು ಮತ್ತು ಪಿಒಎಸ್ ಟರ್ಮಿನಲ್‌ಗಳಲ್ಲಿ ಈ ಸೇವೆ ದೊರೆಯಲಿದೆ. ಎಟಿಎಂ ಯಂತ್ರವು ಗ್ರಾಹಕರ ಕಣ್ಣಿನ ರೆಟಿನಾ ಅಥವಾ ಬೆರಳಚ್ಚನ್ನು ಸ್ಕ್ಯಾನ್ ಮಾಡಿ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ವ್ಯವಹಾರವನ್ನು ದೃಢೀಕರಿಸಲಿದೆ. ಇದರಿಂದ ಕಾರ್ಡ್‌ಗಳ ದುರ್ಬಳಕೆ ತಪ್ಪಲಿದೆ. ಈ ಸೇವೆ ಪಡೆಯಲು ಆಧಾರ್ ಆಧಾರಿತ ಬಯೋಮೆಟ್ರಿಕ್ ಮಾಹಿತಿ ಅಗತ್ಯ.
ಇಂಥ ಸೌಲಭ್ಯವನ್ನು ಒದಗಿಸುವಂತೆ ಆರ್‌ಬಿಐ , ಪ್ರಾಂತೀಯ ಗ್ರಾಮೀಣ ಬ್ಯಾಂಕ್‌ಗಳು, ಎಲ್ಲ ಕೋ-ಆಪರೇಟೀವ್ ಬ್ಯಾಂಕ್‌ಗಳು, ಕಾರ್ಡ್ ಪೇಮೆಂಟ್ ನೆಟ್‌ವರ್ಕ್‌ಗಳು, ಎಟಿಎಂ ಆಪರೇಟರ್‌ಗಳು, ಪೇಮೆಂಟ್ ಬ್ಯಾಂಕ್‌ಗಳು ಮತ್ತು ಸಣ್ಣ ಹಣಕಾಸು ಬ್ಯಾಂಕ್‌ಗಳು ಸೇರಿದಂತೆ ಎಲ್ಲ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್‌ಗಳಿಗೆ ಅನ್ವಯವಾಗುವಂತೆ ಸುತ್ತೋಲೆ ಹೊರಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.